Select Your Language

Notifications

webdunia
webdunia
webdunia
webdunia

ಸರ್ಕಾರದ ವಿರುದ್ಧ ಔಷಧ ಸರಬರಾಜುದಾರರ ತೀವ್ರ ಅಸಮಾಧಾನ

ಸರ್ಕಾರದ ವಿರುದ್ಧ ಔಷಧ ಸರಬರಾಜುದಾರರ ತೀವ್ರ ಅಸಮಾಧಾನ
bangalore , ಶುಕ್ರವಾರ, 13 ಅಕ್ಟೋಬರ್ 2023 (16:43 IST)
ಬಾಕಿ ಬಿಲ್ ಗಳ ಪಾವತಿ ವಿಳಂಬ ಧೋರಣೆ ವಿರುದ್ಧ ಔಷಧ ಪೂರೈಕೆ ಸರಬರಾಜುದಾರರು ಸಿಡಿದೆದ್ದಿದ್ದಾರೆ.ಇಂದು ರಾಜ್ಯ ಕಂಟ್ರಾಕ್ಟರ್ ಅಸೋಸಿಯೇಷನ್ ನಿಂದ ಮಾಧ್ಯಮಗೋಷ್ಠಿ ನಡೆಸಲಾಗುತ್ತೆ.ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣ ನೇತೃತ್ವದಲ್ಲಿ ಮಾಧ್ಯಮ ಗೋಷ್ಠಿ ನಡೆಯಲಿದೆ
 
ಕೋಟ್ಯಾಂತರ ರೂಪಾಯಿ ಮೌಲ್ಯದ ಔಷಧ ಪೂರೈಸಿ ವರ್ಷಗಳು ಕಳೆದರೂ ಬಿಲ್ ಪಾವತಿ ಬಾಕಿ ಇದೆ.ಸರಬರಾಜುದಾರರಿಗೆ ಬಿಲ್ ಬಾಕಿ ಪಾವತಿಸದೇ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಕಳ್ಳಾಟ ಮಾಡುತ್ತಿರೋದಾಗಿ ಆರೋಪ ಬಂದಿದೆ.ಪ್ರಸಕ್ತ ಸಾಲಿನಲ್ಲಿ ಬರೋಬ್ಬರಿ 600 ಕೋಟಿ ರೂ ಮೊತ್ತದ 733 ಔಷಧಿಗಳಿಗೆ ಬೇಡಿಕೆ ಇದೆ.ಬಾಕಿ ಬಿಲ್ ಗಳ ವಿಲೇವಾರಿ ವಿಳಂಬ ಹಿನ್ನಲೆ ಟೆಂಡರ್ ಗಳಲ್ಲಿ ಭಾಗಿಯಾಗಲು ಕಂಪನಿಗಳು ಹಿಂದೇಟು ಹಾಕಿದೆ.100 ಔಷಧಗಳ ಪೂರೈಕೆ ಮಾಡಿರುವ ಕಂಪನಿಗಳಿಗೆ ನಿಗದಿತ ಸಮಯದಲ್ಲಿ ಪೇಮೆಂಟ್ ಮಾಡಿಲ್ಲ.30 ದಿನಗಳೊಳಗೆ ಬಿಲ್ ಪಾವತಿ ಮಾಡಬೇಕೆಂಬ ನಿಯಮವಿದ್ದರೂ ಅಸಡ್ಡೆ ತೋರಿದೆ.ನಿಗಮದಲ್ಲಿ 90 ಕೋಟಿ ರೂ ಔಷಧ ಹಾಗೂ 40 ಕೋಟಿ ರೂ ವೈದ್ಯಕೀಯ ಉಪಕರಣ ಸೇರಿ ಒಟ್ಟು ‌130 ಕೋಟಿ ರೂ ಬಾಕಿ ಇದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸದ್ದಿಲ್ಲದೇ ಏರಿಕೆಯಾಗ್ತಿದೆ ಡೆಂಗ್ಯೂ