ಒಂದಷ್ಟು ಮಕ್ಕಳು ನ್ಯೂಸೆನ್ಸ್ ಕ್ರಿಯಟ್ ಮಾಡುತ್ತಿದ್ದಾರೆ, ಆದರೆ ಅವರು ಶಾಲೆ ಮಕ್ಕಳಲ್ಲ, ಬೇರೆಯವರು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಾಲೆಯಲ್ಲಿ ಸಮವಸ್ತ್ರದಿಂದ ಬರಬೇಕು.
ಡಿಗ್ರಿ ಕಾಲೇಜಿನಲ್ಲಿ ಸ್ವಲ್ಪ ಸಮಸ್ಯೆ ಇದೆ. ಮುಂದಿನ ದಿನಗಳಲ್ಲಿ ಅದು ಸರಿಹೋಗುತ್ತದೆ. ಯಾವುದೇ ಮಕ್ಕಳು ಹಿಜಾಬ್ ಕೇಸರಿ ಶಾಲು ಧರಿಸುವಂತಿಲ್ಲ. ಬುರ್ಖಾ ಬಿಚ್ಚಿಡಲು ಈಗಾಗಲೇ ಒಂದು ರೂಮ್ ಕೂಡ ವ್ಯವಸ್ಥೆ ಮಾಡ್ತಿದ್ದೇವೆ ಎಂದರು. ಡಿಗ್ರಿ ಕಾಲೇಜು ನಲ್ಲಿ ಸಮವಸ್ತ್ರ ಇಲ್ಲ. 1 ರಿಂದ 12 ತರಗತಿಯವರೆಗೆ ಸಮವಸ್ತ್ರ ಇದೆ. ಹೀಗಾಗಿ ಇಂದು ಎಲ್ಲವೂ ಸರಿ ಹೋಗುತ್ತದೆ. ಮುಸ್ಲಿಂ ಸಮುದಾಯದ ಜೊತೆ ಶಾಂತಿ ಸಭೆ ನಡೆಸಿದ್ದೇವೆ. ಅವರು ಚರ್ಚೆ ಮಾಡಿದ್ದಾರೆ. ಅವರಿಗೂ ಶಾಲೆ ಪ್ರಾರಂಭವಾಗಬೇಕು. ಮಕ್ಕಳು ಶಿಕ್ಷಣ ಪಡೆಯಬೇಕು ಅಂತ ಅವರಿಗೂ ಮನಸ್ಸಿದೆ. ಎಲ್ಲವೂ ಸರಿ ದಾರಿಗೆ ಬರುತ್ತದೆ. ಕೋಟ್೯ ಆದೇಶ ಪಾಲನೆ ಮಾಡಿ ಎಂದು ಮುಖಂಡರಿಗೆ ಹೇಳಿದ್ದೇವೆ. ಮುಂದೆ ಯಾವುದೇ ತೊಂದರೆ ಆಗಲ್ಲ. ಎಲ್ಲವೂ ಸರಿ ಹೋಗಲಿದೆ ಎಂದು ಬಿಸಿ ನಾಗೇಶ್ ಹೇಳಿದ್ದಾರೆ.