Select Your Language

Notifications

webdunia
webdunia
webdunia
webdunia

ಆಂಬುಲೆನ್ಸ್​​​​​ ಗಳ ಸುಗಮ ಸಂಚಾರಕ್ಕೆ ಪ್ರತ್ಯೇಕ ಆ್ಯಪ್

Separate app
bangalore , ಮಂಗಳವಾರ, 12 ಡಿಸೆಂಬರ್ 2023 (15:43 IST)
ಬೆಂಗಳೂರಿನಲ್ಲಿ ಆಂಬುಲೆನ್ಸ್​ ಗಳ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ನೂತನ ಆಪ್​ ಒಂದನ್ನು ಸಿದ್ದಪಡಿಸುತ್ತಿದ್ದಾರೆ.

ಮೊದಲು ಆ್ಯಂಬುಲೆನ್ಸ್‌ ಯಾವ ಸ್ಥಳದಿಂದ ಯಾವ ಸ್ಥಳಕ್ಕೆ ಹೋಗಬೇಕು ಎಂಬ ಮಾಹಿತಿಯನ್ನು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಅದನ್ನು ಸಂಚಾರ ನಿರ್ವಹಣ ಕೇಂದ್ರ ಸಿಬ್ಬಂದಿ ಪರಿಶೀಲಿಸುತ್ತಾರೆ. ಅವರ ಟ್ರಾಫಿಕ್ ಇಲ್ಲದ ರಸ್ತೆಯನ್ನು ಸೂಚಿಸುತ್ತಾರೆ. ಹಾಗೆಯೇ ಒಂದೇ ಸಿಗ್ನಲ್‌ನಲ್ಲಿ 60 ಸೆಕೆಂಡ್‌ಗೂ ಹೆಚ್ಚು ಕಾಲ ನಿಂತಿದ್ದರೆ.

ಆ್ಯಂಬುಲೆನ್ಸ್‌ ಸಂಚರಿಸುವ ಮುಂದಿನ ಸಿಗ್ನಲ್‌ಗೆ ಮೊದಲೇ ಮಾಹಿತಿ ನೀಡಲಾಗುತ್ತೆ. ಅಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತೆ. ಈ ಬಗ್ಗೆ ಆ್ಯಪ್‌ ಡೆವಲಪರ್‌ಗಳ ಜೊತೆಯೂ ಒಂದು ಸುತ್ತಿನ ಚರ್ಚೆಯಾಗಿದೆ. ಸದ್ಯದಲ್ಲಿ ಆ್ಯಪ್ ಲಾಂಚ್ ಆಗಲಿದೆ ಎಂದು ಜಂಟಿ ಪೋಲಿಸ್ ಆಯುಕ್ತ ಅನುಚೇತ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮಿಯೊಂದಿಗೆ ಪತ್ನಿಯ ಚಕ್ಕಂದ: ಅಡ್ಡಿಯಾಗಿದ್ದ ಪತಿ ಮಟಾಶ್