ಬೆಂಗಳೂರು: ನಾಲ್ಕು ಮಕ್ಕಳ ಜತೆ ಪಾಕಿಸ್ತಾನವನ್ನು ತೊರೆದು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ, ಸಚಿನ್ ಮೀನಾ ಎಂಬುವ ವ್ಯಕ್ತಿಯನ್ನು ಮದುವೆಯಾಗಿ ಸುದ್ದಿಯಾಗಿದ್ದ ಪಾಕ್ ಮಹಿಳೆ ಸೀಮಾ ಹೈದರ್ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಭಾರತೀಯನನ್ನು ಪ್ರೀತಿಸಿ ಪಾಕಿಸ್ತಾನ ತೊರೆದು ಬಂದು ಸುದ್ದಿಯಾಗಿದ್ದ ಸೀಮಾ ಮನೆಯಲ್ಲಿ ನಗು ಮೂಡಿದೆ. ದಂಪತಿಗಳು ಇದೀಗ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.
ಇನ್ನೂ ಸೀಮಾ ಅವರಿಗೆ ಪಾಕ್‌ನಲ್ಲಿ ಮದುವೆಯಾಗಿ ಆ ವ್ಯಕ್ತಿಯಿಂದ ನಾಲ್ಕು ಮಕ್ಕಳನ್ನು ಹೊಂದಿದ್ದರು. ಭಾರತದ ಸಚಿನ್ ಜತೆ ಪ್ರೀತಿಯಲ್ಲಿ ಬಿದ್ದ ಸೀಮಾ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದರು. ನಂತರ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಈ ಜೋಡಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ.
ಗಡಿಯಾಚೆಯಿಂದ ಪಾಕಿಸ್ತಾನದಿಂದ ಭಾರತಕ್ಕೆ ಬಂದವರು ಯಾರು. ಸೀಮಾ ಹೈದರ್ ಸೋಮವಾರ ಗ್ರೇಟರ್ ನೋಯ್ಡಾದ ಕೃಷ್ಣ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.