Publish Date: Wed, 03 Jun 2026 (18:23 IST)
Updated Date: Wed, 03 Jun 2026 (18:25 IST)
ಬೆಂಗಳೂರು: ಡಿಕೆ ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ವಿವಿಧ ರಾಜಕೀಯ ಮುಖಂಡರು, ಸರ್ವಧರ್ಮದ ಧಾರ್ಮಿಕ ಮುಖಂಡರು, ಕ್ರೀಡಾ ತಾರೆಯರು, ಸಿನಿ ತಾರೆಯರು ಗಮನ ಸೆಳೆದರು.
ಇನ್ನೂ ಡಿಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸ್ಯಾಂಡಲ್‌ವುಡ್ ಕ್ವೀನ್, ಮಾಜಿ ಸಂಸದೆ ರಮ್ಯಾ ಕೂಡಾ ಈ ಸಮಾರಂಭದಲ್ಲಿ ಭಾಗವಹಿಸಿದರು. ಇನ್ನೂ ಈಗಾಲೂ 18ರ ಯುವತಿಯಂತೆ ಕಾಣುವ ರಮ್ಯಾ ಅವರು ಡಿಕೆ ಶಿವಕುಮಾರ್ ಪ್ರಮಾಣವಚನದಲ್ಲೂ ತುಂಬಾನೇ ಮುದ್ದಾಗಿ ಕಾಣಿಸಿಕೊಂಡರು.
ನ್ಯಾಚುರಲ್ ಬ್ಯೂಟಿಯಾಗಿರುವ ರಮ್ಯಾ ಅವರು ಗುಲಾಬಿ ಬಣ್ಣದ ಸೀರೆಯಲ್ಲಿ ಮಿರ ಮಿಂಚಿದರು. ಡಿಕೆ ಪತ್ನಿ ಹಾಗೂ ಪುತ್ರಿಗೆ ಶುಭಹಾರೈಸಿ, ಪ್ರಮಾಣವಚನ ಸಮಾರಂಭವನ್ನು ಕಣ್ತುಂಬಿಕೊಂಡರು.
ಡಿಕೆ ಕುಟುಂಬದ ಜತೆ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ರಮ್ಯಾ ಅವರು ರಾಜಕೀಯ ಪ್ರವೇಶಿಸಲು ಶಿವಕುಮಾರ್ ಪಾತ್ರನೂ ತುಂಬಾನೇ ಮುಖ್ಯವಾಗಿತ್ತು. ಡಿಕೆ ಪುತ್ರಿ ಐಶ್ವರ್ಯಾ ಅವರ ಆಪ್ತೆಯಾಗಿರುವ ರಮ್ಯಾ ಅವರು ಅವರ ಶಾಲಾ ಕಾರ್ಯಕ್ರಮದಲ್ಲೂ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಾರೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ