Webdunia - Bharat's app for daily news and videos

Install App

ಎಲೆಕ್ಟ್ರಿಕ್ ಗಿಟಾರ್ ನಲ್ಲಿ ಮಾದಕ ದ್ರವ್ಯ ಕಳ್ಳಸಾಗಣಿಕೆ ಹೇಗೆ ಅಂತೀರಾ ಇಲ್ಲಿ ನೋಡಿ

Webdunia
ಗುರುವಾರ, 25 ನವೆಂಬರ್ 2021 (19:39 IST)
ಬೆಂಗಳೂರು: ಎಲೆಕ್ಟ್ರಿಕ್​ ​​​​ಗಿಟಾರ್​​ನಲ್ಲಿ ಮಾದಕ ದ್ರವ್ಯವನ್ನು ಮರೆಮಾಚಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಸ್ಟ್ರೇಲಿಯಾಗೆ ಏರ್ ಕಾರ್ಗೋ ಮೂಲಕ ಕಳ್ಳಸಾಗಣಿಕೆ ಮಾಡುತ್ತಿದ್ದ ಜಾಲವನ್ನು ಡಿಆರ್​ಐ (ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್) ಪತ್ತೆ ಮಾಡಿದೆ.
ತಮಿಳುನಾಡಿನಿಂದ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ರಾಜ್ಯಕ್ಕೆ ಡ್ರಗ್ಸ್ ಅನ್ನು ಏರ್ ಕಾರ್ಗೋ ಮೂಲಕ ಅಕ್ರಮವಾಗಿ ಕಳ್ಳ ಸಾಗಣಿಕೆ ಮಾಡಲಾಗುತ್ತಿತ್ತು. ಈ ಕುರಿತಂತೆ ಡಿಆರ್​ಐ ಖಚಿತ ಮಾಹಿತಿ ಪಡೆದಿತ್ತು. ತಮಿಳುನಾಡಿನ ತಿರುಚ್ಚಿಯ ಕೊರಿಯರ್ ಏಜೆನ್ಸಿಯಲ್ಲಿ ಡ್ರಗ್ಸ್ ಬುಕ್ ಮಾಡಲಾಗಿದೆ ಎಂಬ ಸುಳಿವು ಅಧಿಕಾರಿಗಳಿಗೆ ಸಿಕ್ಕಿತ್ತು. ಚೆನ್ನೈ ಮೂಲದ ವ್ಯಕ್ತಿ ಎಲೆಕ್ಟ್ರಿಕ್ ಗಿಟಾರ್ ಬುಕ್ ಮಾಡಿ ಅದರಲ್ಲಿ ಸ್ಯೂಡೋಫೆಡ್ರಿನ್ ಮಾದಕ ದ್ರವ್ಯವನ್ನು ಏರ್ ಕಾರ್ಗೋ ಮೂಲಕ ಆಸ್ಟ್ರೇಲಿಯಾಗೆ ಸಂಗೀತ ವಾದ್ಯ ಎಂದು ಪಾರ್ಸಲ್ ಮಾಡಲು ಸಿದ್ಧತೆ ನಡೆಸಿದ್ದ. ಈ ವೇಳೆ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ 50 ಲಕ್ಷ ಮೌಲ್ಯದ 3 ಕೆಜಿ ತೂಕದ ಸ್ಯೂಡೋಫೆಡ್ರಿನ್ ಮಾದಕ ದ್ರವ್ಯವನ್ನು ವಶಕ್ಕೆ ಪಡೆದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ