Select Your Language

Notifications

webdunia
webdunia
webdunia
webdunia

ಕನ್ನಡ ಮಾತಾಡಿದ ಸೆಕ್ಯೂರಿಟಿ ಗಾರ್ಡ್ ಗೆ ಗುಜರಾತಿ ಫೈನಾನ್ಸಿಯರ್ ಹಲ್ಲೆ

kannada
bengaluru , ಶುಕ್ರವಾರ, 23 ಜುಲೈ 2021 (17:21 IST)

ಕನ್ನಡದಲ್ಲಿ ಉತ್ತರಿಸಿದ ಸೆಕ್ಯೂರೆಟಿ ಮೇಲೆ ಗುಜರಾತ್ ಮೂಲದ ಫೈನಾನ್ಸಿಯರ್ ಬ್ಲೇಡ್ ನಿಂದ ಕೈ ಕೊಯ್ದು ಹಲ್ಲೆ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಹಲಸೂರಿನ ಸಾಯಿ ಕೇಂಬ್ರಿಡ್ಜ್ ರೆಸಿಡೆ

ನ್ಸಿ ಅಪಾರ್ಟ್ ಮೆಂಟ್ ನಲ್ಲಿ ವಾಸವಿರುವ ಫೈನಾನ್ಸಿಯರ್ ಪ್ರಭುಲಾಲ್, ಸೆಕ್ಯೂರೆಟಿ ಗಾರ್ಡ್ ವಿನೋದ್ ಮೇಲೆ ಬ್ಲೇಡ್ ನಿಂದ ಹಲ್ಲೆ ಮಾಡಿದ್ದಾನೆ.

ಅಪಾರ್ಟ್ ಮೆಂಟ್ ಡೋರ್ ಕೀ ಕಳೆದುಕೊಂಡಿದ್ದ ಪ್ರಭುಲಾಲ್, ಸೆಕ್ಯುರೆಟಿ ಗಾರ್ಡ್ ಬಳಿ ಬಂದು ಕೀ ಎಲ್ಲಾದರೂ ನೋಡಿದಿಯಾ. ಕೀ ಹುಡುಕುವಂತೆ ಹೇಳಿದ್ದಾನೆ.

ಈ ವೇಳೆ ನಮಗೆ ಗೊತ್ತಿಲ್ಲ ಸಾರ್. ನಾವು ನಿಮ್ಮ ಫ್ಲಾಟ್ ಬಳಿ ಬರಲ್ಲ. ಕೇವಲ ಗೇಟ್ ನಲ್ಲಿ ಕೆಲಸ ಮಾಡ್ತಿವಿ ಎಂದಿರೋ ಸೆಕ್ಯೂರಿಟಿ ಗಾರ್ಡ್ ಉತ್ತರಿಸಿದ್ದಾರೆ. ಇದರಿಂದ ಕುಪಿತಗೊಂಡ ಪ್ರಭುಲಾಲ್, ಕನ್ನಡದಲ್ಲಿ ಯಾಕೆ ಉತ್ತರ ಕೊಡುತ್ತಿಯಾ? ಹಿಂದಿಯಲ್ಲಿ ಮಾತನಾಡು ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ.

ಹಲಸೂರು ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದ ಪ್ರಭುಲಾಲ್ ವಿರುದ್ದ ಎಫ್ ಐಆರ್ ದಾಖಲಾಗಿದ್ದು, ಪ್ರಭುದೇವ್ ಸೆಕ್ಯೂರಿಟಿ ಗಾರ್ಡ್ ಮೇಲೆ ಮಾತ್ರವಲ್ಲ ಈ ಹಿಂದೆ ಅಪಾರ್ಟ್ ಮೆಂಟ್ ನಿವಾಸಿ ಹಾಗೂ ಮಾಲೀಕರ ಮೇಲೂ ಹಲ್ಲೆ ಮಾಡಿದ್ದಾನೆ ಎಂದು ದೂರು ಕೇಳಿ ಬಂದಿದೆ.

ಪ್ರಭುಲಾಲ್ ಕುಚೇಷ್ಟೆ ಪ್ರಶ್ನಿಸಿದ್ದಕ್ಕೆ ಅಪಾರ್ಟ್ಮೆಂಟ್ ನಿರ್ದೇಶಕ ರಂಗನಾಥ್ ಅವರ ಮೇಲೂ ಹಲ್ಲೆ ಮಾಡಲಾಗಿದೆ. ರಂಗನಾಥ್ ಕಾರನ್ನು ನಿಲ್ಲಿಸಿ ಥಳಿಸಿರುವ ಆರೋಪ ಕೂಡ ಕೇಳಿ ಬಂದಿದೆ.

ಒಂದಲ್ಲ ಎರಡಲ್ಲ ಮೂರು ಬಾರಿ ಪ್ರಭುಲಾಲ್ ವಿರುದ್ದ ದೂರು ದಾಖಲಾಗಿದ್ದು, ಇದುವರೆಗೂ ಒಮ್ಮೆಯೂ ಪ್ರಭುಲಾಲ್ ನನ್ನು ಪೊಲೀಸರು ಬಂಧಿಸಿಲ್ಲ ಎಂದು ಅಪಾರ್ಟ್ ಮೆಂಟ್ ನಿವಾಸಿಗಳು ಆರೋಪಿಸಿದ್ದಾರೆ.

ಅಪಾರ್ಟ್ ಮೆಂಟ್ ಮಾಲೀಕ ಅಶ್ವಥ್ ಗೆ 20 ಲಕ್ಷ ಸಾಲ ಕೊಟ್ಟಿದ್ದ ಪ್ರಭುಲಾಲ್, 20 ಲಕ್ಷಕ್ಕೆ ಬಡ್ಡಿ ಸಮೇತ 2 ಕೋಟಿ ಹಣ ಕೊಡು ಇಲ್ಲ ಅಪಾರ್ಟ್ ಮೆಂಟ್ ಖಾಲಿ ಮಾಡಲ್ಲ ಅಂತ ಕೂಡ ಕಿರಿಕ್ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಒಪ್ಪಂದದಂತೆ ಬಿಎಸ್ ವೈ ರಾಜೀನಾಮೆ? ಶ್ರೀನಿವಾಸ್ ಪ್ರಸಾದ್