Select Your Language

Notifications

webdunia
webdunia
webdunia
webdunia

3 ಲಕ್ಷ ಮಾತ್ರೆಗಳನ್ನು ಬಳಸಿ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ!

3 ಲಕ್ಷ ಮಾತ್ರೆಗಳನ್ನು ಬಳಸಿ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ!
bengaluru , ಗುರುವಾರ, 22 ಜುಲೈ 2021 (19:01 IST)
ಬೆಂಗಳೂರು
: ಕರೋನಾ ಸಾಂಕ್ರಾಮಿಕ ರೋಗ ಎಲ್ಲರನ್ನು ಹೈರಾಣಾಗಿಸಿದೆ. ಮೂರನೇ ಅಲೆಗೆ ಜನರನ್ನು ಸಿದ್ದಗೊಳಿಸಬೇಕು ಹಾಗೂ ಗುರುಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸಬೇಕು ಎನ್ನುವ ಹಿನ್ನಲೆಯಲ್ಲಿ, ಜೆ.ಪಿ ನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ 3 ಲಕ್ಷ ಮಾತ್ರೆಗಳನ್ನು ಬಳಸಿ ವಿಶೇಷ ಅಲಂಕಾರವನ್ನು ಮಾಡಲಾಗಿದೆ.
ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ದ ಹೋರಾಟದಲ್ಲಿ ಪ್ರಮುಖವಾಗಿ ಬಳಕೆ ಆಗಿರುವಂತಹ ವಸ್ತುಗಳಾದ ಮಾಸ್ಕ್‌, ಪ್ಯಾರಾಸಿಟಮಾಲ್‌, ವಿಟಮಿನ್‌ ಸಿ, ಆಲ್ಕಾಫ್‌, ಬಿ ಕಾಂಫ್ಲೆಕ್ಸ್‌ ನಂತಹ ಮಾತ್ರೆಗಳನ್ನೇ ಬಳಸಿಕೊಂಡು ಬೇರೆ ಯಾರೂ ಮಾಡದಂತಹ ವಿಶಿಷ್ಟವಾದ ಆಲಂಕಾರವನ್ನು ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ ಮಾಡಲಾಗಿದೆ.
ದೇವಸ್ಥಾನದಲ್ಲಿ ಫಲ ಪುಷ್ಪಗಳನ್ನು ಬಳಸಿಕೊಂಡು ವಿಶೇಷ ಅಲಂಕಾರ ಮಾಡುವುದು ಸಾಮಾನ್ಯ. ಅಂತಹ ಸಾಮಗ್ರಿಗಳನ್ನು ಬಳಸಿಕೊಂಡು ಮಾಡುವ ಆಲಂಕಾರದಲ್ಲಿ ಬಳಸಲಾಗಿರುವ ವಸ್ತುಗಳನ್ನು ಮತ್ತೊಮ್ಮೆ ಉಪಯೋಗಿಸಲು ಸಾಧ್ಯವಿಲ್ಲ. ಅಪಾರ ವೆಚ್ಚ ಮಾಡಿ ಮಾಡುವ ಆಲಂಕಾರ ಜನರಿಗೆ ಉಪಯೋಗವಾಗುವಂತಿರಬೇಕು ಹಾಗೂ ವಿಭಿನ್ನವಾಗಿರಬೇಕು ಎನ್ನುವ ಉದ್ದೇಶದಿಂದ ಕರೋನಾ ವಿರುದ್ದದ ಹೋರಾಟದಲ್ಲಿ ಪ್ರಮುಖವಾಗಿ ಬಳಸಲಾಗುತ್ತಿರುವ ವಸ್ತುಗಳನ್ನು ಬಳಸಿಕೊಂಡು ಆಲಂಕಾರ ಮಾಡಲಾಗಿದೆ. ಈ ಆಲಂಕಾರದಲ್ಲಿ ಬಳಸಿಕೊಂಡಿರುವ ಎಲ್ಲಾ ಔಷದ ಹಾಗೂ ರೇಷನ್‌ ಕಿಟ್‌ ನ ಪದಾರ್ಥಗಳನ್ನು ಮಾನವರು, ಹಸುಗಳು ಹಾಗೂ ನಾಯಿಗಳಿಗೆ ದಾನದ ರೂಪದಲ್ಲಿ ನೀಡಲಾಗುತ್ತದೆ.
ಜುಲೈ 24 ರಿಂದ ಒಂದು ವಾರಗಳ ಕಾಲ ಈ ಆಲಂಕಾರ ವಿರಲಿದ್ದು ನಂತರ ಇದನ್ನು ಬಡಜನರಿಗೆ ಉಚಿತವಾಗಿ ಹಂಚಲಾಗುವುದು ಎಂದು ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದ ಟ್ರಸ್ಟಿ ರಾಮ್‌ ಮೋಹನ ರಾಜ್‌ ತಿಳಿಸಿದರು.
ಆಲಂಕಾರದಲ್ಲಿ ಬಳಸಲಾದ ಮಾತ್ರೆಗಳು
ಮಾತ್ರೆಗಳ ಒಟ್ಟು 3,00,000 (3 ಲಕ್ಷ ಮಾತ್ರೆಗಳು)
ಡೋಲೋ 650
ವಿಟಮಿನ್‌ ಸಿ ಮಾತ್ರೆಗಳು
ಕಾಫ್‌ಸಿಲ್‌ ಮಾತ್ರೆಗಳು
ಬಿ ಕಾಂಪ್ಲೆಕ್ಸ್‌ ಮಾತ್ರೆಗಳು
ಪ್ಯಾರಸಿಟಮಾಲ್‌
ಈಸಿಬ್ರೀಥ್‌
2 ಸಾವಿರ ಕ್ಕೂ ಹೆಚ್ಚು ಸ್ಯಾನಿಟೈಸರ್‌ ಮಾತ್ರೆಗಳು
10 ಸಾವಿರ 8 ವಿವಿಧ ಬಣ್ಣದ ಮಾಸ್ಕ್‌ಗಳು
3 ಸಾವಿರಕ್ಕೂ ಹೆಚ್ಚು ಮೆಡಿಮಿಕ್ಸ್‌ ಹಾಗೂ ಡೆಟಾಲ್‌ ಸೋಪುಗಳು
500 ಕ್ಕೂ ಹೆಚ್ಚು ಟೆನ್ನಿಸ್‌ ಬಾಲ್‌
-8 ಬಣ್ಣದ 10 ಸಾವಿರ ಮಾಸ್ಕ್‌ಗಳ ಬಳಕೆ
-ಕರೋನಾ ವಿರುದ್ದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ ವಸ್ತುಗಳ ಬಳಸಿ ವಿಶೇಷ ಅಲಂಕಾರ
-ಒಂದು ವಾರದ ಬಳಿಕ ಒಂದು ಲಕ್ಷ ಕುಟುಂಬಕ್ಕೆ ಹಂಚುವ ನಿರ್ಧಾರ
ರೇಷನ್‌ ಕಿಟ್‌ ವಸ್ತುಗಳಾದ ಅಕ್ಕಿ, ಬೇಳೆ ಗೋಧಿ ಹಿಟ್ಟು, ಮೈದಾ ಹಿಟ್ಟು, ಸಕ್ಕರೆ, ಉಪ್ಪು, ರವೆ, ಎಣ್ಣೆ, ಈರುಳ್ಳಿ, ಮೆಕ್ಕೆ ಜೋಳ, ಬಿಸ್ಕತ್‌, ತೆಂಗಿನಕಾಯಿ ಈ ಎಲ್ಲಾ ಸಾಮಗ್ರಿಗಳನ್ನು ಪ್ರಸಾದದ ರೂಪದಲ್ಲಿ ಅಗತ್ಯವಿರುವ ಜನರಿಗೆ ಹಂಚಲಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 1653 ಮಂದಿಗೆ ಕೊರೊನಾ ಸೋಂಕು; 31 ಸಾವು