Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಮರ್ಡರ್ ರಹಸ್ಯ ಬಯಲು: ದೇಹ ಪೀಸ್ ಮಾಡಿದ್ದು ಯಾಕೆ ವಿವರ ಇಲ್ಲಿದೆ

Mahalakshmi murder case

Krishnaveni K

ಬೆಂಗಳೂರು , ಶನಿವಾರ, 5 ಅಕ್ಟೋಬರ್ 2024 (13:37 IST)
ಬೆಂಗಳೂರು: ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸುದ್ದಿಯಾಗಿದ್ದ ವೈಯಾಲಿಕಾವಲ್ ನ ಮಹಾಲಕ್ಷ್ಮಿ ಮರ್ಡರ್ ಪ್ರಕರಣದ ಸಂಪೂರ್ಣ ಮಾಹಿತಿ ಈಗ ಹೊರಬಿದ್ದಿದೆ. ಆರೋಪಿ ಮುಕ್ತಿ ರಂಜನ್ ರಾಯ್ ಮರ್ಡರ್ ಮಾಡಿದ್ದು ಹೇಗೆ, ಯಾಕೆ ಎಂಬುದರ ಕಂಪ್ಲೀಟ್ ವಿವರ ಲಭ್ಯವಾಗಿದೆ.

ವೈಯಾಲಿಕಾವಲ್ ನ ಮಹಾಲಕ್ಷ್ಮಿ ಮನೆಯಲ್ಲಿ ಆಕೆಯ ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್ ನಲ್ಲಿರಿಸಲಾಗಿತ್ತು. ಕೊಲೆಯ ಜಾಡು ಹಿಡಿದ ಪೊಲೀಸರಿಗೆ ಆಕೆಯ ಪ್ರೇಮಿ ಮುಕ್ತಿ ರಂಜನ್ ರಾಯ್ ಕೃತ್ಯವೆಗಿರುವುದು ಗೊತ್ತಾಗಿದೆ. ಪಶ್ಚಿಮ ಬಂಗಾಲ ಮೂಲದ ಆತ ಆಗಲೇ ಕೊಲೆ ಮಾಡಿ ಊರು ಸೇರಿಕೊಂಡು ತಲೆಮರೆಸಿಕೊಂಡಿದ್ದ. ಆದರೆ ಪೊಲೀಸರು ತನ್ನನ್ನು ಪತ್ತೆ ಮಾಡುತ್ತಾರೆಂದು ಖಚಿತವಾದಾಗ ಮನೆಯ ಪಕ್ಕದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ.

ಆದರೆ ಈ ಪ್ರಕರಣದಲ್ಲಿ ಆತ ಹತ್ಯೆ ಮಾಡಲು ಕಾರಣವೇನೆಂದು ಈಗ ಬಯಲಾಗಿದೆ. ಮಹಾಲಕ್ಷ್ಮಿ ಮತ್ತು ಮುಕ್ತಿ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಹೀಗಾಗಿ ಮಹಾಲಕ್ಷ್ಮಿಯನ್ನು ಕೆಲವೊಮ್ಮೆ ಮನೆವರೆಗೆ ಬಿಟ್ಟು ಹೋಗುತ್ತಿದ್ದ. ಈ ವೇಳೆ ಇಬ್ಬರ ನಡುವೆ ಪ್ರೀತಿ ಮೂಡಿದೆ. ಬಳಿಕ ಇಬ್ಬರೂ ಮದುವೆಯಾಗಲು ತೀರ್ಮಾನಿಸಿದ್ದರು.

ಆದರೆ ಮಹಾಲಕ್ಷ್ಮಿ ತನಗೆ ಈಗಾಗಲೇ ಒಂದು ಮದುವೆಯಾಗಿ ಮಗು ಇರುವ ವಿಚಾರ ಮುಚ್ಚಿಟ್ಟಿದ್ದಳು. ಇದನ್ನು ಅರಿಯದೇ ಮುಕ್ತಿ ತನ್ನಿಬ್ಬರು ಸಹೋದರರ ಬಳಿ ತಾನು ಮದುವೆಯಾಗುತ್ತಿರುವ ವಿಚಾರ ಹೇಳಿಕೊಂಡಿದ್ದ. ಅದರೆ ದಿನ ಕಳೆದಂತೆ ಮಹಾಲಕ್ಷ್ಮಿ ವರ್ತನೆ ಮೇಲೆ ಆತನಿಗೆ ಸಂಶಯವಾಗಿದೆ. ಆಕೆಗೆ ಬೇರೆ ಯುವಕನ ಸಂಪರ್ಕವಿದೆ ಎಂಬ ಅನುಮಾನ ಮೂಡಿದೆ. ಈ ಹಿನ್ನಲೆಯಲ್ಲಿ ಆಕೆಯ ಮೊಬೈಲ್ ಚೆಕ್ ಮಾಡಿದಾಗ ಈಗಾಗಲೇ ಮದುವೆಯಾಗಿ ಮಗು ಇರುವ ವಿಚಾರ ಗೊತ್ತಾಗಿದೆ.

ಹೀಗಾಗಿ ಮುಕ್ತಿ ರಂಜನ್ ಆಕೆಯಿಂದ ಅಂತರ ಕಾಯ್ದುಕೊಂಡಿದ್ದ. ಬಳಿಕ ತನ್ನ ಜೊತೆ ಕೆಲಸ ಮಾಡುವ ಇನ್ನೊಬ್ಬಾಕೆಯ ಜೊತೆ ಸ್ನೇಹ ಬೆಳೆಸಿದ್ದ. ಇದು ಮಹಾಲಕ್ಷ್ಮಿಯನ್ನು ಕೆರಳಿಸಿತ್ತು. ಆ ಯುವತಿಯ ಜೊತೆ ಜಗಳವಾಡಿದ್ದಳು. ಬಳಿಕ ಮುಕ್ತಿಗೂ ಬೆದರಿಕೆ ಹಾಕಿದ್ದಳು. ಆಧರೆ ಆತ ನಿನಗೆ ಬೇರೆ ಸಂಬಂಧವಿದೆ ಎಂದು ಗೊತ್ತಾಗಿದೆ. ಅದಕ್ಕೆ ಮದುವೆಯಾಗಲ್ಲ ಎಂದಿದ್ದ.

ನಾನು ವಿಚ್ಛೇದನ ನೀಡುತ್ತೇನೆ. ನೀನು ನನ್ನ ಮದುವೆಯಾಗಲ್ಲ ಎಂದರೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದಳು. ಬಳಿಕ ಮುಕ್ತಿ ಸುಮ್ಮನಾಗಿದ್ದ. ಹತ್ಯೆಯಾಗುವ ಹಿಂದಿನ ದಿನ ಪ್ರೇಮಿಗಳು ಒಂದಾಗಿದ್ದರು. ವಾರದ ರಜೆಯಿದ್ದುದ್ದರಿಂದ ಮಹಾಲಕ್ಷ್ಮಿ ಹೆಬಗೋಡಿಯಲ್ಲಿರುವ ಮುಕ್ತಿ ಮನೆಗೆ ಹೋಗಿದ್ದಳು. ಮೊದಲು ಆತ ಬಾಗಿಲು ತೆರೆದಿರಲಿಲ್ಲ. ಬಳಿಕ ಆಕೆಯ ಒತ್ತಾಯಕ್ಕೆ ಕಟ್ಟುಬಿದ್ದು ಬಾಗಿಲು ತೆಗೆದಿದ್ದ.

ಬಳಿಕ ಇಬ್ಬರೂ ಮಾತನಾಡಿಕೊಂಡು ಒಂದಾಗುವ ನಿರ್ಧಾರ ಮಾಡಿದ್ದಾರೆ. ಅಂದು ರಾತ್ರಿ ಮುಕ್ತಿ ರಂಜನ್ ಮನೆಯಲ್ಲಿ ಮಹಾಲಕ್ಷ್ಮಿ ಉಳಿದುಕೊಂಡಿದ್ದಾಳೆ. ಮರುದಿನ ಇಬ್ಬರೂ ವೈಯಾಲಿಕಾವಲ್ ನಲ್ಲಿರುವ ಮಹಾಲಕ್ಷ್ಮಿ ಮನೆಗೆ ಬಂದಿದ್ದಾರೆ. ಈ ನಡುವೆ ಇಬ್ಬರ ನಡುವೆ ಜಗಳವಾಗಿದೆ. ಕೋಪದಲ್ಲಿ ಮಹಾಲಕ್ಷ್ಮಿ ಹೊಡೆದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆಕೆಯ ಕೆನ್ನೆಗೆ ಬಾರಿಸಿದ್ದಾನೆ. ಈ ವೇಳೆ ಮಹಾಲಕ್ಷ್ಮಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಗ ಮುಕ್ತಿರಂಜನ್ ಆಕೆಯ ಮುಖಕ್ಕೆ ದಿಂಬು ಇಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಕೊಲೆ ಬಳಿಕ ಪಾರಾಗಲು ಇಂಟರ್ನೆಟ್ ಸಹಾಯ ಪಡೆದಿದ್ದಾನೆ. ಮೃತದೇಹವನ್ನು ಹಾಗೆಯೇ ಇಟ್ಟರೆ ವಾಸನೆ ಬರಬಹುದು ಎಂದು ಫ್ರಿಡ್ಜ್ ನಲ್ಲಿಡಲ ಪ್ಲ್ಯಾನ್ ಮಾಡಿದ್ದಾನೆ. ಅದಕ್ಕಾಗಿ ಒಂದು ಹೊಸ ಮಚ್ಚನ್ನು ಅಂಗಡಿಯಿಂದ ಖರೀದಿಸಿ ತಂದು ಮೃತದೇಹವನ್ನು ವಾಶ್ ರೂಂಗೆ ತೆಗೆದುಕೊಂಡು ಹೋಗಿ ಪೀಸ್ ಮಾಡಿದ್ದಾನೆ. ಬಳಿಕ ಎಲ್ಲಾ ಪೀಸ್ ಗಳನ್ನೂ ಫ್ರಿಡ್ಜ್ ನಲ್ಲಿಟ್ಟು, ವಾಶ್ ರೂಂಗೆ ಆಸಿಡ್ ಹಾಕಿ ತೊಳೆದಿದ್ದಾನೆ.

ಬಳಿಕ ತನ್ನ ತಮ್ಮನಿಗೆ ಕೊಲೆ ಮಾಡಿರುವ ವಿಚಾರ ಹೇಳಿ ಬೈಕ್ ಸಮೇತ ಊರು ಬಿಟ್ಟಿದ್ದಾನೆ. 1660 ಕಿ.ಮೀ. ಬೈಕ್ ನಲ್ಲಿ ಪ್ರಯಾಣ ಮಾಡಿ ಭದ್ರಕ್ ಗೆ ತಲುಪಿದ್ದಾನೆ. ಊರಿಗೆ ಹೋಗಿ ತಾಯಿ ಬಳಿಯೂ ಕೊಲೆ ವಿಚಾರ ಹೇಳಿದ್ದಾನೆ. ಆಗ ತಾಯಿ ಗಂಜಂನಲ್ಲಿರುವ ತಮ್ಮನ ಜೊತೆಗಿರಲು ಸಲಹೆ ನೀಡಿದ್ದಾಳೆ. ಗಂಜಂನಲ್ಲಿ ಮುಕ್ತಿರಂಜನ್ ಸಹೋದರ ವಿದ್ಯಾಭ್ಯಾಸದ ಸಲುವಾಗಿ ನೆಲೆಸಿದ್ದ. ಅಲ್ಲಿ ಇದ್ದುಕೊಂಡು ತಮ್ಮನ ಮೊಬೈಲ್ ನಿಂದ ಯೂ ಟ್ಯೂಬ್ ನಲ್ಲಿ ಕನ್ನಡ ವಾಹಿನಿಗಳನ್ನು ವೀಕ್ಷಿಸಿ ಕೊಲೆ ಬಗ್ಗೆ ಅಪ್ ಡೇಟ್ ಪಡೆದುಕೊಳ್ಳುತ್ತಿದ್ದ. ಯಾವಾಗ ತನ್ನನ್ನು ಹುಡುಕಿಕೊಂಡು ಪೊಲೀಸರು ಪಶ್ಚಿಮ ಬಂಗಾಲಕ್ಕೆ ಬರುತ್ತಿದ್ದಾರೆ ಎಂದು ತಿಳಿಯಿತೋ ಮತ್ತೆ ತಾಯಿ ಮನೆಗೆ ಬಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಆನ್ ಲೈನ್ ನಲ್ಲೇ ಆಸ್ತಿ ಇ ಖಾತಾ ಪಡೆಯುವುದು ಹೇಗೆ, ಇಲ್ಲಿದೆ ವಿವರ