Select Your Language

Notifications

webdunia
webdunia
webdunia
webdunia

ಆನ್ ಲೈನ್ ನಲ್ಲೇ ಆಸ್ತಿ ಇ ಖಾತಾ ಪಡೆಯುವುದು ಹೇಗೆ, ಇಲ್ಲಿದೆ ವಿವರ

BBMP

Krishnaveni K

ಬೆಂಗಳೂರು , ಶನಿವಾರ, 5 ಅಕ್ಟೋಬರ್ 2024 (11:34 IST)
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಖಾತಾಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಎ ಖಾತಾ ಮತ್ತು ಬಿ ಖಾತೆಗಳೆರಡನ್ನೂ ಡಿಜಿಟಲೀಕರಣ ಮಾಡಲಾಗಿದೆ. ಇದರ ಬಗ್ಗೆ ವಿವರ ಇಲ್ಲಿದೆ ನೋಡಿ.
 

21 ಲಕ್ಷಕ್ಕೂ ಹೆಚ್ಚು ಕರಡು ಇ ಖಾತಾಗಳನ್ನು ಯಾರಾದರೂ ಯಾವುದೇ ಸಮಯದಲ್ಲಿ ಎಲ್ಲಿಯಾದರೂ ಆನ್ ಲೈನ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಆನ್ ಲೈನ್ ಮೂಲಕವೇ ಇ ಖಾತಾಗಳನ್ನು ಪಡೆಯಲು ಮಾಡಿರುವ ವ್ಯವಸ್ಥೆ ಬಗ್ಗೆ ಬಿಬಿಎಂಪಿ ಮಾಹಿತಿ ನೀಡಿದೆ.

ಎ ಖಾತ ಮತ್ತು ಬಿ ಖಾತ ಸ್ವತ್ತುಗಳಿಗೆ ಸಂಬಂಧಿಸಿದ ಕರಡು ಇ ಖಾತಾಗಳನ್ನು ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಗಿದ್ದು ಅದಕ್ಕಾಗಿ https://bbmpeaasthi.karnataka.gov.in/ ಎಂಬ ಲಿಂಕ್ ಗೆ ಹೋಗಿ ಇ ಖಾತಾಗಳನ್ನು ಡೌನ್ ಲೋಡ್ ಮಾಡಿಕೊಳ್ಳಭಹುದಾಗಿದೆ. ಇನ್ನು ಮುಂದೆ ತಮ್ಮ ಇ ಖಾತಾಗಳನ್ನು ಪಡೆಯಲು ಬಿಬಿಎಂಪಿ ಕಚೇರಿಗೆ ಅಲೆದಾಡಬೇಕಾಗಿಲ್ಲ.

ಇ ತಂತ್ರಾಂಶವು ವಿದ್ಯುನ್ಮಾನವಾಗಿ ಕಾವೇರಿಯಿಂದ ಪಡೆಯುವ ಕ್ರಯ ಪತ್ರ ಅಥವಾ ನೊಂದಾಯಿತ ಪತ್ರದ ಸಂಖ್ಯೆ ಅಗತ್ಯವಾಗಿದೆ. 2024 ರ ಏಪ್ರಿಲ್ 1 ರಿಂದ ಇಲ್ಲಿಯವರೆಗಿನ ಸ್ವತ್ತಿನ ಋಣಭಾರ ಪ್ರಮಾಣ ಪತ್ರ ಹಾಗೂ ಋಣಭಾರ ಪ್ರಮಾಣ ಪತ್ರ ಸಂಖ್ಯೆಯನ್ನು ಮಾತ್ರ ನಮೂದಿಸಿದರೆ ಸಾಕು. ಆಸ್ತಿ ತೆರಿಗೆಯ 10 ಅಂಕಿಯ ಅರ್ಜಿ ಸಂಖ್ಯೆಯನ್ನು ನಮೂದಿಸಿ ಹಾಗೂ ಮಾಹಿತಿಯನ್ನು ವಿದ್ಯುನ್ಮಾನವಾಗಿ ಪಡೆಯಲಾಗುತ್ತದೆ. ಮಾಲಿಕರ ಆಧಾರ್ ಇ ಕೆವೈಸಿ, ಬೆಸ್ಕಾಂ 1- ಅಂಕಿಯ ಖಾತೆಯನ್ನು ನಮೂಸಿದಿಸಿ ದಾಖಲೆ ಪರಿಶೀಲಿಸಲಾಗುತ್ತದೆ.

ನಿಮ್ಮ ಭಾವಚಿತ್ರ ಮತ್ತು ಮೇಲೆ ಹೇಳಿದ ದಾಖಲೆಗಳನ್ನು ಅಪ್ ಲೋಡ್ ಮಾಡಿ ಸ್ವಯಂ ಘೋಷಣೆ ಮಾಡಬಹುದು. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಸ್ವಯಂ ಚಾಲಿತವಾಗಿ ಇ ಖಾತಾ ನಿಮಗೆ ಸಿಗುತ್ತದೆ. ಇದಕ್ಕಾಗಿ ಇನ್ನು ಬಿಬಿಎಂಪಿಯಲ್ಲಿ ಯಾರನ್ನೂ ಭೇಟಿ ಮಾಡಬೇಕಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸನಾತನ ಧರ್ಮ ನಾಶ ನೋಡ್ತಾ ಇರಿ: ಪವನ್ ಕಲ್ಯಾಣ್ ಗೆ ಉದಯನಿಧಿ ತಿರುಗೇಟು