Select Your Language

Notifications

webdunia
webdunia
webdunia
webdunia

ಮತ್ಸ್ಯ ದರ್ಶಿನಿಯಲ್ಲಿ ಸಿಗಲಿವೆ ಕಡಲ ಮೀನುಗಳು...!

ಮತ್ಸ್ಯ ದರ್ಶಿನಿಯಲ್ಲಿ ಸಿಗಲಿವೆ ಕಡಲ ಮೀನುಗಳು...!
bangalore , ಬುಧವಾರ, 8 ಫೆಬ್ರವರಿ 2023 (19:35 IST)
ಮೀನು ಪ್ರಿಯರಿಗೆ  ಸಿಹಿ ಸುದ್ದಿಯೊಂದು ಸಿಕ್ಕಿದೆ.ಬೆಂಗಳೂರಿನಾದ್ಯಂತ 100 ಸ್ಥಳಗಳಲ್ಲಿ ಫಿಶ್ ಕ್ಯಾಂಟೀನ್ ಆರಂಭಿಸಲು ಮೀನುಗಾರಿಕೆ ಇಲಾಖೆ ನಿರ್ಧರಿಸಿದೆ.ಬೆಂಗಳೂರಿನ ಪ್ರತಿ ವಾರ್ಡ್ನಲ್ಲಿ ಈ ಫೀಶ್ ಕ್ಯಾಂಟೀನ್ ಪ್ರಾರಂಭಿಸಲು ಸರ್ಕಾರ ನಿರ್ಧರಿಸಲಾಗಿದೆ.ಆರಂಭಿಕವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  ಸಹಯೋಗದಲ್ಲಿ ಮೀನುಗಳನ್ನು ಮಾರಾಟ ಮಾಡುವುದರ ಜೊತೆಗೆ ಊಟವನ್ನು ಒದಗಿಸುವ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ.ನಗರದ ಎಂಟು ಝೋನ್ ಗಳಲ್ಲಿ 100 ಫೀಶ್ ಕ್ಯಾಂಟೀನ್ ತೆರೆಯಲಿವೆ.ಇದಕ್ಕಾಗಿ ಮೀನುಗಾರಿಕೆ ಇಲಾಖೆಯಿಂದ ಸಿದ್ದತೆ ನಡೆದಿದೆ.ಈ ಕ್ಯಾಂಟೀನ್ಗಳಲ್ಲಿ ಸಂಪೂರ್ಣ ಮೀನಿನ ಊಟ ಸಿಗಲಿದೆ, ಫುಲ್ ಫಿಶ್ ಮೀಲ್ಸ್'ಗೆ 100 ರೂ. ನಿಗದಿಪಡಿಸಲಾಗುತ್ತಿದೆ  ಎಂದು ತಿಳಿದುಬಂದಿದೆ.
ಈ ಉಪಕ್ರಮದ ಮೂಲಕ ಇಲಾಖೆಯು ಯುವಕರಿಗೆ ಉದ್ಯೋಗ ಸೃಷ್ಟಿಸುವತ್ತ ಗಮನಹರಿಸುತ್ತಿದೆ. ಇದನ್ನು ಖಾಸಗಿ ಸಾರ್ವಜನಿಕ  ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ನಡೆಸಬೇಕೆ ಅಥವಾ ಸರ್ಕಾರದ ಅನುದಾನದ ಮೂಲಕ ನಡೆಸಬೇಕೆ ಎಂಬುದರ ಕುರಿತು ಚಿಂತನೆಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಕ್ಯಾಂಟೀನ್ ಆರಂಭಿಸಿದ ಬಳಿಕ,  ಇತರೆ ಪ್ರದೇಶಗಳಲ್ಲಿ ಇದೇ ರೀತಿಯ ಕ್ಯಾಂಟೀನ್ಗಳನ್ನು ಆರಂಭಿಸಲಾಗುತ್ತದೆ, ಇದು ಶಾಶ್ವತ ಅಲ್ಲಾ ತಾತ್ಕಾಲಿಕವಾದ ಕಂಟೆನರ್ ಹಾಕಲಾಗುತ್ತದೆ. ಇದನ್ನು ಕೆಎಫ್ಡಿಸಿ ಮುಖಾಂತರ ತಾಜಾ ಮೀನುಗಳನ್ನು  ಸರಬರಾಜು ಮಾಡಲಾಗುತ್ತದೆ.ಇದ್ರಿಂದ ಬೆಂಗಳೂರಿಗರಿಗೆ ಕಡಿಮೆ ಬೆಲೆಯಲ್ಲಿ ಒಳ್ಳೆಯ ಮೀನುಗಳನ್ನು ಸಿಗುತ್ತದೆ. ನೂರು ಕಂಟೆನರ್ಗಳನ್ನ ನಗರದ ವಿವಿಧ  ಜಾಗದಲ್ಲಿ ಅಳವಡಿಸಲಾಗುತ್ತದೆ. ಇಗಾಗ್ಲೇ ೧೧ ಜಾಗಗಳನ್ನು  ಗುರುತಿಸಲಾಗಿದೆ. ಈ ಫಿಶ್ ಕ್ಯಾಂಟನ್ ನಲ್ಲಿ ಬೆಳ್ಳಿಗ್ಗೆ ಮೀನುಗಳ ಮಾರಾಟ  ಮಾಡಲಾಗುತ್ತದೆ. ನಂತರ ಸಂಜೆ  ಹೊತ್ತಿನಲ್ಲಿ ಮೀನಿನಖಾದ್ಯಗಳು ಜನ್ರಿಗೆ ಸಿಗಲಿದೆ.

ಇನ್ನೂ 100 ಕ್ಯಾಂಟೀನ್ ಗಳನ್ನು ಸ್ಥಾಪಿಸುವ ಸ್ಥಳ ಅಂತಿಮಗೊಳಿಸಲಾಗಿದೆ.ಇಲ್ಲಿಸಮುದ್ರದ ನಾನಾ ಬಗೆಯ ಮೀನುಗಳು ದೊರೆಯಲಿವೆ.ಇನ್ನೂ ಈ ಕ್ಯಾಂಟೀನ್ ನಲ್ಲಿ ಸೂಪ್, ಫಿಶ್ ಫ್ರೈ,ಫಿಶ್ ಕರಿ, ಫಿಶ್ ಕಬಾಬ್,ಅನ್ನ ಮತ್ತು ಉಪ್ಪಿನಕಾಯಿ ಸ್ಟಾರ್ಟಗ್ರಳು ಸೇರಿದಂತೆ 24 ಬಗೆಯ ಮೀನಿನ ಭಕ್ಷ್ಯಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇನ್ನೂ ಈಗಾಗಲೇ ಕೆಲವೆಡೆ ಮೀನು ಹೋಟೆಲ್ ಗಳನ್ನು ಸರ್ಕಾರ ಆರಂಭಿಸಿದೆ.ಈ ಕ್ಯಾಂಟೀನ್ ಗಳು ಸಹ ಒಳ್ಳೆಯ ರೀತಿಯಿಂದ ನಡೆದುಕೊಂಡು ಬರ್ತಿವೆ.ಒಂದು ಪುಲ್ ಫೀಶ್ ಊಟಕ್ಕೆ ಸದ್ಯ 70 ರೂಪಾಯಿ ನಿಗದಿಗೊಳಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ವಾರದಲ್ಲಿ ಒಂದು ಮೊಟ್ಟೆ 7 ರೂ ಏರಿಕೆ