Publish Date: Mon, 07 Nov 2022 (07:22 IST)
Updated Date: Mon, 07 Nov 2022 (08:27 IST)
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೊಡ ಟೊಂಕಾದಲ್ಲಿ ಲಲಿತಾ ಕಂಪನಿಯ ಜಗದೀಶ್ ತಾಂಡೇಲರ ಪ್ರೀಶಾ ಬೋಟಿಗೆ 15 ಕೆಜಿ ತೂಕದ ವಿರಳವಾಗಿ ಸಿಗುವ ಸನ್ ಫಿಶ್ ಬಲೆಗೆ ಬಿದ್ದಿದೆ.
ಕರ್ನಾಟಕ ಕರಾವಳಿ ಭಾಗದಲ್ಲಿ ಈ ಮೀನು ಅಪರೂಪಕ್ಕೆ ಮೀನುಗಾರರ ಬಲೆಗೆ ಬೀಳುತ್ತವೆ.
ಇಷ್ಟು ವರ್ಷದಲ್ಲಿ ಒಂದೆರೆಡು ಬಾರಿ ಮಾತ್ರ ಮೀನುಗಾರರ ಬಲೆಗೆ ಬಿದ್ದಿರುವ ಕುರಿತು ಕಡಲ ವಿಜ್ಞಾನಿಗಳು ದಾಖಲಿಸಿದ್ದಾಗಿ ಕಾರವಾರದ ಕಡಲ ಜೀವಶಾಸ್ತ್ರ ವಿಭಾಗದ ತಜ್ಞ ಶಿವಕುಮಾರ್ ಹರಗಿಯವರು ಮಾಹಿತಿ ನೀಡಿದ್ದಾರೆ.