Select Your Language

Notifications

webdunia
webdunia
webdunia
webdunia

ಕೊರೊನಾ ನಡುವೆಯೂ ಮಕ್ಕಳಿಗೆ ಪ್ರವಾಸ ಶಾಲೆ ವಿರುದ್ಧ ಸರ್ಕಾರ ನೋಟಿಸ್

webdunia
ಬೆಂಗಳೂರು , ಭಾನುವಾರ, 12 ಡಿಸೆಂಬರ್ 2021 (14:25 IST)
ಕೋವಿಡ್ -19 ಕಾರಣದಿಂದಾಗಿ ಕಟ್ಟುನಿಟ್ಟಾದ ಮಾರ್ಗಸೂಚಿಗಳ ಹೊರಡಿಸಿ ಪ್ರವಾಸ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡದಂತೆ ಶಾಲೆಗಳಿಗೆ ಆದೇಶ ನೀಡಿದ್ದರೂ ನಗರದ ಶಾಲೆಯೊಂದು 122 ವಿದ್ಯಾರ್ಥಿಗಳನ್ನು 4 ದಿನಗಳ ಕಾಲ ಹೈದರಾಬಾದ್ ಪ್ರವಾಸಕ್ಕೆ ರವಾನಿಸಿ, ಮಕ್ಕಳ ಜೊತೆ ಚೆಲ್ಲಾಟವಾಡುತ್ತಿದೆ.ಬೆಂಗಳೂರು ಉತ್ತರ ಬ್ಲಾಕ್ ಶಿಕ್ಷಣಾಧಿಕಾರಿ ಟಿ ಎನ್ ಕಮಲಾಕರ ಅವರು ಪ್ರತಿಕ್ರಿಯೆ ನೀಡಿ, ಪ್ರವಾಸಕ್ಕೆ ಯಾವುದೇ ಪೂರ್ವಾನುಮತಿ ಪಡೆದಿಲ್ಲದ ಕಾರಣ ನಾವು ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಈಗಾಗಲೇ ಶಾಲಾ ಆಡಳಿತ ಮಂಡಳಿಯ ಅಧಿಕಾರಿಗಳನ್ನು ಸಂಪರ್ಕಿಸಲಾಗಿದ್ದು, ಮಕ್ಕಳು ಎಲ್ಲಿದ್ದರೂ ಶೀಘ್ರಗತಿಯಲ್ಲಿ ಹಿಂತಿರುಗಲು ಆದೇಶಿಸುವಂತೆ ಪ್ರಿನ್ಸಿಪಾಲ್ ಮತ್ತು ಮ್ಯಾನೇಜ್‌ಮೆಂಟ್ ಇಬ್ಬರಿಗೂ ನಿರ್ದೇಶನ ನೀಡಿದ್ದೇವೆಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪು ಮಹೋತ್ಸವ ಪಾದಯಾತ್ರೆ