Select Your Language

Notifications

webdunia
webdunia
webdunia
webdunia

ಶಾಲೆಗಳು ಹಿಜಾಬ್ ಬಲವಂತವಾಗಿ ತೆಗಿಸುತಿದೆ

ಶಾಲೆಗಳು ಹಿಜಾಬ್ ಬಲವಂತವಾಗಿ ತೆಗಿಸುತಿದೆ
ಬೆಂಗಳೂರು , ಬುಧವಾರ, 16 ಫೆಬ್ರವರಿ 2022 (15:12 IST)
ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸುವ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರ ಹಿಜಾಬ್ ಅನ್ನು ಶೈಕ್ಷಣಿಕ ಸಂಸ್ಥೆಗಳ ಆವರಣದಲ್ಲಿ ಬಲವಂತವಾಗಿ ತೆಗೆಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿರುವ ಕಾನೂನುಬಾಹಿರ ಹಾಗೂ ಅವಮಾನಕರ ಕೃತ್ಯ ಅತ್ಯಂತ ಖಂಡನೀಯ ಎಂದು ಮುಸ್ಲಿಮ್ ವಿದ್ವಾಂಸರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಮಾರತ್ ಎ ಶರೀಅ ಕರ್ನಾಟಕದ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮೀಯ್ಯತುಲ್ ಉಲಮಾ ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಹೈಕೋರ್ಟ್ ನ ಮಧ್ಯಂತರ ಆದೇಶದಲ್ಲಿ ಯಾವ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಗಳು(ಸಿಡಿಸಿ) ಸಮವಸ್ತ್ರವನ್ನು ನಿಶ್ಚಯಿಸಿದೆಯೋ ಆ ಕಾಲೇಜುಗಳ ತರಗತಿಗಳಲ್ಲಿ ಮಾತ್ರ ಇತರ ಧಾರ್ಮಿಕ ಉಡುಗೆಗಳ ಜೊತೆಗೆ ಹಿಜಾಬನ್ನು ಅನುಮತಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದರು.
 
ಈ ಆದೇಶವನ್ನು ಸಂಸ್ಥೆಯು ಅನ್ವಯಿಸುವಂತೆ ಮಾಡಲು ಎರಡು ಷರತ್ತುಗಳನ್ನು ಪೂರೈಸಬೇಕು. ಮೊದಲನೆಯದು ಸಂಸ್ಥೆಯು ಕಾಲೇಜು ಅಭಿವೃದ್ಧಿ ಮಂಡಳಿಯನ್ನು ಹೊಂದಿರಬೇಕು ಹಾಗೂ ಎರಡನೆಯದು ಸಿಡಿಸಿಯು ಯಾವುದೆ ಧಾರ್ಮಿಕ ಉಡುಪನ್ನು ಹೊರತುಪಡಿಸಿ ಸಮವಸ್ತ್ರವನ್ನು ಸೂಚಿಸಿರಬೇಕು. ಈ ಆದೇಶವು ಶಾಲೆಗಳಿಗೆ ಅನ್ವಯಿಸುವುದಿಲ್ಲ ಮತ್ತು ಅದರೊಂದಿಗೆ, ಕಾಲೇಜು ಅಭಿವೃಧಿ ಸಮಿತಿಯು ಏಕರೂಪದ ಸಮವಸ್ತ್ರವನ್ನು ಜಾರಿಗೆ ತರಲು ಸೂಚಿಸಿರುವ ಕಾಲೇಜುಗಳಿಗೆ ಮಾತ್ರ ಇದು ಅನ್ವಯಿಸುತ್ತದೆ ಎಂಬುದು ಸ್ಪಷ್ಟ ಎಂದು ಅವರು ಹೇಳಿದರು.
 
ಯುವತಿಯರ ಹಿಜಾಬನ್ನು ವಿವೇಚನಾರಹಿತವಾಗಿ ಮತ್ತು ಬಲವಂತವಾಗಿ ತೆಗೆದು ಹಾಕುವುದು ಮತ್ತು ಅದರ ಪ್ರಕ್ರಿಯೆಯನ್ನು ಕೆಲವರು ಚಿತ್ರೀಕರಿಸುವುದು ಅಥವಾ ವಿಡಿಯೋ ಚಿತ್ರೀಕರಣ ಮಾಡುವುದು ಹಾಗೂ ಅವರ ಚಾರಿತ್ರ್ಯಕ್ಕೆ ಭಂಗ ತರುವುದು ಕ್ರಿಮಿನಲ್ ಅಪರಾಧವಾಗಿರುವುದು ಮಾತ್ರವಲ್ಲ, ಅವರ ಖಾಸಗಿತನ, ಘನತೆ ಮತ್ತು ಮೂಲಭೂತ ಹಕ್ಕುಗಳಿಗೆ ಚ್ಯುತಿಯುಂಟಾಗಿದೆ ಎಂದು ಇಫ್ತಿಖಾರ್ ಅಹ್ಮದ್ ಖಾಸ್ಮಿ ತಿಳಿಸಿದರು.
 
ವಿದ್ಯಾರ್ಥಿಗಳು ಶಾಲೆಯಲ್ಲಿ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಆಯಾ ಶಾಲಾ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಶಾಲಾ, ಅಧಿಕಾರಿಗಳು ಹೊರಗಿನ ಜನರಿಗೆ ತಮ್ಮ ಅನುಮತಿಯಿಲ್ಲದೆ ವಿದ್ಯಾರ್ಥಿಗಳ ಚಿತ್ರೀಕರಣ ನಡೆಸಲು ಶಾಲಾ ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡುವ ಮೂಲಕ ತಮ್ಮ ಬೇಜವಾಬ್ದಾರಿಯನ್ನು ಪ್ರದರ್ಶಿಸಿದ್ದಾರೆ ಎಂದು ಅವರು ಕಿಡಿಗಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪೀಣ್ಯ ಫ್ಲೈಓವರ್‌ ಸಂಚಾರಕ್ಕೆ ಮುಕ್ತ