Select Your Language

Notifications

webdunia
webdunia
webdunia
webdunia

ಸವದಿ ಪಕ್ಷ ಬಿಟ್ಟು ಹೋಗಿದ್ದು ಪೀಡೆ ತೊಲಗಿದಂತಾಗಿದೆ : ರಮೇಶ್ ಜಾರಕಿಹೊಳಿ

ಸವದಿ ಪಕ್ಷ ಬಿಟ್ಟು ಹೋಗಿದ್ದು ಪೀಡೆ ತೊಲಗಿದಂತಾಗಿದೆ : ರಮೇಶ್ ಜಾರಕಿಹೊಳಿ
ಚಿಕ್ಕೋಡಿ , ಶನಿವಾರ, 15 ಏಪ್ರಿಲ್ 2023 (08:52 IST)
ಚಿಕ್ಕೋಡಿ : ಲಕ್ಷ್ಮಣ ಸವದಿ ಪಕ್ಷ ಬಿಟ್ಟು ಹೋಗಿದ್ದು ಪೀಡೆ ತೊಲಗಿದಂತಾಗಿದೆ ಎಂದು ಸವದಿ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಏಕವಚನದಲ್ಲಿ ಕಿಡಿಕಾರಿದರು.
 
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತಾನಾಡಿದ ಅವರು, ಸೋತವರನ್ನು ಪಕ್ಷ ಡಿಸಿಎಂ ಮಾಡಿತ್ತು. ಆದರೆ ಅವನು ಪಕ್ಷ ನಿಷ್ಠೆ ತೋರಿಸಿಲ್ಲ. ಬದಲಾಗಿ ಇಂದು ನಮ್ಮನ್ನು ಬಿಟ್ಟು ಹೋಗಿದ್ದಾನೆ, ನಮಗೆ ಒಳ್ಳೆದಾಗಿದೆ.

ರಮೇಶ್ ಜಾರಕಿಹೊಳಿ ಮತ್ತೆ ಕಾಂಗ್ರೆಸ್ ಹೋಗುತ್ತಾನೆ ಎಂಬ ಯೋಚನೆ ಸವದಿ ತಲೆಯಲ್ಲಿ ಇತ್ತು. ಆದರೆ ನನಗೆ ಮಂತ್ರಿ ಸ್ಥಾನವಿಲ್ಲದಿದ್ದರೂ ನಾನು ಪಕ್ಷದಲ್ಲೇ ಇದ್ದೇನೆ, ಉದ್ದ ಅಂಗಿ ಹಾಕಿರುವವನು ಪಕ್ಷದಿಂದ ಹೊರಗೆ ಹೋಗಿರುವುದು ನನಗೆ ಸಂತೋಷ ತಂದಿದೆ ಎಂದರು.

ಒಂದೂವರೆ ವರ್ಷ ಸವದಿ ಮಂತ್ರಿ ಇದ್ದರೂ ಅಥಣಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಲಿಲ್ಲ. ಸವದಿಯನ್ನು ವಿಶೇಷ ವಿಮಾನದಲ್ಲಿ ಡಿಕೆಶಿ ಕರೆದುಕೊಂಡು ಹೋಗಿದ್ದಾನೆ. ಡಿಕೆಶಿ ಕುತಂತ್ರಿ ಎಂದು ವಾಗ್ದಾಳಿ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಸಿಎಂ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ