ಪ್ರವಾಸ, ತೀರ್ಥಯಾತ್ರೆಗೆ ಹೋಗುವ ಸಮಯದಲ್ಲಿ ನಿಮ್ಮ ಮನೆಯ ಸುರಕ್ಷತೆಯ ಕುರಿತು ಭಯವೇ? ಇನ್ನು ಭಯಪಡಬೇಕಿಲ್ಲ. ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಅಂಥವರ ಸಹಾಯಕ್ಕಾಗಿ ವಿನೂತನ ಯೋಜನೆಯನ್ನು ರೂಪಿಸಿದ್ದಾರೆ.
ಪ್ರವಾಸಕ್ಕೆ ಹೋಗುವವರು ಮಾಡಬೇಕಾದ್ದದ್ದು ಇಷ್ಟೇ, ದಕ್ಷಿಣ ಕನ್ನಡ ಕಂಟ್ರೋಲ್ ರೂಂನ ದೂರವಾಣಿ ಸಂಖ್ಯೆ 9480805300 ಗೆ ವಾಟ್ಸಪ್ ಮೂಲಕ ಜಿಪಿಎಸ್ ಲೋಕೇಶನ್ ಹಾಗೂ ಮನೆ ವಿಳಾಸ ಕುರಿತು ವಿವರವಾದ ಮಾಹಿತಿ ರವಾನಿಸಿದರೆ ಸಾಕು. ಮುಂದೆ ನಿಮ್ಮ ಮನೆಯ ರಕ್ಷಣೆ ಪೊಲೀಸರದ್ದು, ಇದಕ್ಕೆ ಪೊಲೀಸರು ನೀಡಿದ ಹೆಸರು 'ಗೃಹ ಸುರಕ್ಷಾ'
ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಜಂಟಿಯಾಗಿ 'ಗೃಹ ಸುರಕ್ಷಾ' ಆಪ್ ಮೂಲಕ ಮನೆ ಕಳ್ಳತನ, ದರೋಡೆಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ