Publish Date: Sat, 11 Jul 2026 (11:52 IST)
Updated Date: Sat, 11 Jul 2026 (11:58 IST)
ಬೆಳಗಾವಿ: ಆರ್ ಎಸ್ಎಸ್ ವಿರುದ್ಧ ಗೃಹಸಚಿವ ಪ್ರಿಯಾಂಕ್ ಖರ್ಗೆ ಸದಾ ಕೆಂಡ ಕಾರುತ್ತಿರುತ್ತಾರೆ. ಆದರೆ ಇತ್ತ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ ಸಭೆಗೆ ನಮ್ಮ ವಿರೋಧವಿಲ್ಲ ಎಂದಿದ್ದಾರೆ.
ಪ್ರತಿನಿತ್ಯ ಆರ್ ಎಸ್ಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ಬಾಣಗಳನ್ನು ಬಿಡುತ್ತಿರುತ್ತಾರೆ. ನಾವು ಇರೋವರೆಗೂ ಆರ್ ಎಸ್ಎಸ್ ಪಥಸಂಚಲನ ಮಾಡಬೇಕಾದರೆ ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಈಗಾಗಲೇ ಖಡಕ್ ಸಂದೇಶ ನೀಡಿದ್ದಾರೆ.
ಇದರ ನಡುವೆಯೇ ಬೆಳಗಾವಿಯಲ್ಲಿ ಆರ್ ಎಸ್ಎಸ್ ರಾಷ್ಟ್ರೀಯ ಪ್ರಾಂತ ಪ್ರಚಾರಕರ ಸಭೆ ನಡೆಸಲು ತೀರ್ಮಾನಿಸಿದೆ. ಮೂರು ದಿನಗಳ ಕಾಲ ಸಮಾವೇಶ ನಡೆಯಲಿದೆ. ಈ ಸಭೆಗೆ ನಮ್ಮ ವಿರೋಧವಿಲ್ಲ ಎಂದು ಲೋಕಪಯೋಗಿ ಸಚಿವ ಮತ್ತು ಬೆಳಗಾವಿಯ ಪ್ರಭಾವೀ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವುದು ಒಂದು ಖಾಸಗಿ ಕಾರ್ಯಕ್ರಮ. ಅದಕ್ಕೆ ಸರ್ಕಾರದ ಯಾವುದೇ ಅನುಮತಿ ಅಗತ್ಯವಿರುವುದಿಲ್ಲ. ಹೀಗಾಗಿ ಆಡಳಿತದ ಕಡೆಯಿಂದ ಅಗತ್ಯವಿರುವ ಎಲ್ಲಾ ಸಹಕಾರ ನೀಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ