Select Your Language

Notifications

webdunia
webdunia
webdunia
webdunia

ಹೈಕಮಾಂಡ್ ಭೇಟಿ ಬೆನ್ನಲ್ಲೇ ಪರಮೇಶ್ವರ್ ಭೇಟಿಯಾದ ಸತೀಶ್ ಜಾರಕಿಹೊಳಿ: ಹೊಸ ಸಿಎಂ ಪಕ್ಕಾನಾ

Sathish Jarkiholi

Krishnaveni K

ಬೆಂಗಳೂರು , ಸೋಮವಾರ, 7 ಅಕ್ಟೋಬರ್ 2024 (10:05 IST)
ಬೆಂಗಳೂರು: ಹೈಕಮಾಂಡ್ ಭೇಟಿ ಮಾಡಿದ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಗೃಹಸಚಿವ ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿರುವುದು ಈಗ ಕಾಂಗ್ರೆಸ್ ಒಳಗೇ ಹೊಸ ಚರ್ಚೆ ಹುಟ್ಟುಹಾಕಿದೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿ ಬಂದಿದ್ದರು. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿತ್ತು. ಆದರೆ ಇದಕ್ಕೆ ಇದು ಸಹಜ ಭೇಟಿ ಎಂದು ರಾಜ್ಯ ನಾಯಕರು ತೇಪೆ ಹಚ್ಚುವ ಕೆಲಸ ಮಾಡಿದ್ದರು.

ಆದರೆ ಇದು ಇಷ್ಟಕ್ಕೇ ನಿಂತಿಲ್ಲ. ಖರ್ಗೆ ಭೇಟಿ ಮಾಡಿದ ಬೆನ್ನಲ್ಲೇ ಇದೀಗ ಸತೀಶ್ ಜಾರಕಿಹೊಳಿ ಗೃಹಸಚಿವ ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದಾರೆ. ಇದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮೊದಲು ದಲಿತ ನಾಯಕರು ಸಭೆ ನಡೆಸಿದ್ದರು. ಆದರೆ ಈಗ ಹೈಕಮಾಂಡ್ ಭೇಟಿ ಬಳಿಕ ಪ್ರಭಾವೀ ನಾಯಕರಿಬ್ಬರು ಭೇಟಿ ಮಾಡಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಇತ್ತೀಚೆಗೆ ದಸರಾ ಉದ್ಘಾಟನೆ ಬಳಿಕ ಸಿಎಂ ಸಿದ್ದರಾಮಯ್ಯ ಇನ್ನು ಒಂದು ವರ್ಷ ನಿಮ್ಮ ಆಶೀರ್ವಾದವಿರಲಿ ಎಂದಿದ್ದರು. ಹೀಗಾಗಿ ಇನ್ನು ಒಂದು ವರ್ಷದೊಳಗೆ ಕರ್ನಾಟಕ ಹೊಸ ಸಿಎಂ ಕಾಣಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ ದಲಿತ ಸಿಎಂ ಚರ್ಚೆ ಕೂಡಾ ಶುರುವಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಧ್ವನಿ ಇಲ್ಲದವರ ದನಿ, ವಿ.ಎಸ್.ಉಗ್ರಪ್ಪ: ಸಿ.ಎಂ.ಸಿದ್ದರಾಮಯ್ಯ