Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸೋಲಿಗೆ ಮತಯಂತ್ರ ಕಾರಣವೆಂದ ಸತೀಶ್‌ ಜಾರಕಿಹೊಳಿ

Public Works Minister Satish Jarakiholi

Sampriya

ಬೆಳಗಾವಿ , ಶನಿವಾರ, 23 ನವೆಂಬರ್ 2024 (17:52 IST)
Photo Courtesy X
ಬೆಳಗಾವಿ:  ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾ ವಿಕಾಸ ಅಘಾಡಿ ಸೋಲಿಗೆ ಇವಿಎಂ ಮತಯಂತ್ರ ಕಾರಣ‌. ಇವಿಎಂ ಮಷಿನ್ ಬಗ್ಗೆ ಅನುಮಾನವಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ಸಾಕಷ್ಟು ಕಡೆಗಳಲ್ಲಿ ಇವಿಎಂ ಮಷೀನ್ ಬಗ್ಗೆ ಚರ್ಚೆ ಆಗ್ತಿದೆ. ಒಂದು ಕಡೆ ಕೊಡ್ತಾರೆ ಇನ್ನೊಂದು ಕಡೆ ಕಸಿದುಕೊಳ್ತಾರೆ ಎಂದು ದೂರಿದರು.

ಇವಿಎಂ ಮತಯಂತ್ರದಲ್ಲೂ ಅಡ್ಜಸ್ಟ್ಮೆಂಟ್ ಇದೆ. ಜಮ್ಮು ನಮಗೆ ಕೊಟ್ರೂ, ಹರಿಯಾಣ ಅವರು ತಗೊಂಡ್ರು. ಈ ರೀತಿ ಗೀವ್ ಆ್ಯಂಡ್ ಟೆಕ್ ಪಾಲ್ಸಿ ಮಾಡ್ತಿದ್ದಾರೆ‌. ಅವರಿಗೆ ಬೇಕಾದನ್ನ ತೆಗೆದುಕೊಳ್ತಾರೆ, ಬೇಡದನ್ನ ಬಿಡ್ತಾರೆ ಎಂದು ಆರೋಪಿಸಿದ್ದಾರೆ.

2028ರ ವಿಧಾನಸಭಾ ಚುನಾವಣೆಯಲ್ಲಿ ನಾನೂ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದೇನೆ. ಈ ಚುನಾವಣೆಯು ಇತರರನ್ನು ಆಯ್ಕೆ ಮಾಡುವ ನಾಯಕನಾಗಿ ನನ್ನನ್ನು ಬಲಪಡಿಸಿದೆ. ಬಿಜೆಪಿ ಹಿಡಿತದಲ್ಲಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲೂ ಈ ಹಿಂದೆ ಗೆದ್ದಿದ್ದೇವೆ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಈಗ ಇಲ್ಲ. ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಇರುತ್ತಾರೆ. ಸಚಿವ ಸಂಪುಟದಲ್ಲಿ ಖಾತೆ ಬದಲಾವಣೆ ಬಗ್ಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಜಾರ್ಖಂಡ್ ಗೆ ಸೊರೇನ್ ಮತ್ತೆ ದೊರೆ ಆಗಿದ್ದು ಇದೇ ಕಾರಣಕ್ಕೆ