Publish Date: Wed, 25 Jan 2023 (10:22 IST)
Updated Date: Wed, 25 Jan 2023 (09:55 IST)
ಚಿಕ್ಕಬಳ್ಳಾಪುರ : ನಿವೇಶನ ರಹಿತರು ಸರ್ಕಾರದ ಉಚಿತ ನಿವೇಶನ ಅಥವಾ ವಸತಿ ವ್ಯವಸ್ಥೆಯ ಸೌಲಭ್ಯ ಪಡೆಯಲು ಯಾವುದೇ ವ್ಯಕ್ತಿಗೆ ಒಂದು ನಯಾಪೈಸೆ ಲಂಚ ನೀಡಬಾರದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರದ ಹೊಸಹುಡ್ಯದಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ನಿವೇಶನ ರಹಿತರಿಗೆ ನೀಡುವ ಉಚಿತ ನಿವೇಶನ ಹಾಗೂ ವಸತಿ ಸೌಕರ್ಯಗಳನ್ನು ಪಡೆಯಲು ಯಾವುದೇ ಫಲಾನುಭವಿಗಳು ಸ್ಥಳೀಯ ಜನಪ್ರತಿನಿಧಿಗಳಿಗೆ,
ಅಧಿಕಾರಿ ಮತ್ತು ಸಿಬ್ಬಂದಿಗೆ ಲಂಚ ಕೊಟ್ಟರೆ ತಮ್ಮ ನಿವೇಶನಗಳ ಮಂಜೂರಾತಿಯನ್ನು ರದ್ದುಪಡಿಸಲಾಗುತ್ತದೆ ಎಂದು ಹೇಳಿದರು.