Webdunia - Bharat's app for daily news and videos

Install App

ಸುರಕ್ಷತಾ ಪರಿಶೋಧನಾ ತಂಡದಿOದ ಮೈಸೂರು-ಎಲಿಯೂರು ಭಾಗದ ಸುರಕ್ಷತೆ ಪರಿಶೀಲನೆ

Webdunia
ಶನಿವಾರ, 4 ಡಿಸೆಂಬರ್ 2021 (20:09 IST)
ಮೈಸೂರು:-ನೈಋತ್ಯ ರೈಲ್ವೆ ಪ್ರಧಾನ ಕಛೇರಿಯಿಂದ ಸುರಕ್ಷತಾ ಪರಿಶೋಧನಾ ತಂಡವು ಮೈಸೂರು ವಿಭಾಗದ ಮೈಸೂರು-ಎಲಿಯೂರು ಭಾಗದ ಸುರಕ್ಷತೆಯನ್ನು ಶುಕ್ರವಾರ ಪರಿಶೀಲನೆಯನ್ನು ನಡೆಸಿತು.
ರೈಲುಗಳ ಸುರಕ್ಷಿತ ಕಾರ್ಯಾಚರಣೆಗಾಗಿ, ನಿಗದಿತ ನಿಯಮಗಳು ಮತ್ತು ಮಾರ್ಗಸೂಚಿಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾಮಾನ್ಯ ನ್ಯೂನತೆಗಳನ್ನು ಗುರುತಿಸಲು, ನೈಋತ್ಯ ರೈಲ್ವೆ ಪ್ರಧಾನ ಕಛೇರಿಯ ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಅಲೋಕ್ ತಿವಾರಿ ನೇತೃತ್ವದ ರೈಲ್ವೆ ಅಧಿಕಾರಿಗಳ ಬಹು-ಇಲಾಖಾ ತಂಡವು ಎರಡು ದಿನಗಲ ಕಾಲ ಮೈಸೂರು ವಿಭಾಗದ ಮೈಸೂರು-ಎಲಿಯೂರು ಭಾಗದಲ್ಲಿ ಸುರಕ್ಷತಾ ಆಡಿಟ್ ತಪಾಸಣೆ ನಡೆಸಿತು. ತಂಡವು ವಿದ್ಯುತ್, ಯಾಂತ್ರಿಕ, ಕಾರ್ಯಾಚರಣೆ, ಸುರಕ್ಷತೆ ಮತ್ತು ಸಂವಹನ ಮತ್ತು ದೂರಸಂಪರ್ಕ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡಿತ್ತು.
ತoಡವು ಗುರುವಾರ ಶ್ರೀರಂಗಪಟ್ಟಣದಲ್ಲಿನ ಪ್ರಮುಖ ಮತ್ತು ಸಣ್ಣ ಸೇತುವೆಗಳನ್ನು ಪರಿಶೀಲಿಸಿತು. ಮತ್ತು ಮಾರ್ಗದಲ್ಲಿ ನಾಗನಹಳ್ಳಿ ಹಾಗು ಪಾಂಡವಪುರ ನಿಲ್ದಾಣಗಳಲ್ಲಿನ ಪಾಯಿಂಟ್‌ಗಳು ಮತ್ತು ಕ್ರಾಸಿಂಗ್‌ಗಳು, ಲೆವೆಲ್ ಕ್ರಾಸಿಂಗ್ ಗೇಟ್‌ಗಳು ಮತ್ತು ಮೈಸೂರು-ಬೆಂಗಳೂರು ಹಳಿ ದ್ವಿಪಥದ ಮುಖ್ಯ ಮಾರ್ಗದ ಟ್ರಾಕ್ಷನ್, ಉಪ ನಿಲ್ದಾಣಗಳನ್ನು ಸಹ ಪರಿಶೀಲಿಸಿತು. ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯೊoದಿಗೆ ಅಧಿಕಾರಿಗಳು ಮಾತನಾಡಿ ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ರಕ್ಷಿಸುವುದರ ಹೊರತಾಗಿ ರೈಲು ಬೇರ್ಪಡುವುದು ಗಮನಕ್ಕೆ ಬಂದಾಗ, ಅವರು ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗು ಇತರೆ ನಿಯಮಗಳ ಬಗ್ಗೆ, ಅವರ ಜ್ಞಾನವನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಸಂವಾದ ನಡೆಸಿದರು. ನಿಲ್ದಾಣದ ವ್ಯವಸ್ಥಾಪಕರುಗಳ ತಪಾಸಣಾ ವೇಳಾಪಟ್ಟಿಯನ್ನು ಮತ್ತು ಅವರು ನಿರ್ವಹಿಸಬೇಕಾದ ಇತರ ಪ್ರಮುಖ ದಾಖಲೆ ಪುಸ್ತಕಗಳನ್ನು ತಂಡವು ಪರಿಶೀಲಿಸಿತು.
ಮೈಸೂರಿನಲ್ಲಿ ಇಂದು ಮೈಸೂರು ನಿಲ್ದಾಣದ ಪಿಟ್‌ಲೈನ್‌ಗಳು, ಎಲೆಕ್ಟಿçಕಲ್ ಇಂಟರ್‌ಲಾಕಿoಗ್, ಯಾರ್ಡ್, ಕೋಚಿಂಗ್ ಡಿಪೋ, ಸಿಬ್ಬಂದಿ ಅಂಗಳ ಮತ್ತು ಚಾಲನಾ ಸಿಬ್ಬಂದಿ ಕೊಠಡಿಯ ಎಲ್ಲಾ ಸುರಕ್ಷತಾ ಮಾನದಂಡಗಳ ಮತ್ತು ಅವುಗಳ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ತೀವ್ರ ತಪಾಸಣೆ ನಡೆಸಲಾಯಿತು. ನಂತರ ತಿವಾರಿ ಅಧ್ಯಕ್ಷತೆಯಲ್ಲಿ ಇರ್ವಿನ್ ರಸ್ತೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯ ಸಭಾಂಗಣದಲ್ಲಿ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ರೊಂದಿಗೆ ಸುರಕ್ಷತಾ ವಿಚಾರ ಸಂಕಿರಣವನ್ನು ಸಹ ನಡೆಸಲಾಯಿತು. ಸೆಮಿನಾರ್‌ನಲ್ಲಿ ಮುಖ್ಯ ಎಲೆಕ್ಟಿçಕಲ್ ಜನರಲ್ ಇಂಜಿನಿಯರ್ ಆರ್.ಕೆ.ಶರ್ಮಾ, ಮುಖ್ಯ ಸಂಚಾರ ಯೋಜನಾ ವ್ಯವಸ್ಥಾಪಕ ಎಚ್.ಎಂ.ದಿನೇಶ್, ಮುಖ್ಯ ರೋಲಿಂಗ್ ಸ್ಟಾಕ್ ಎಂಜಿನಿಯರ್ ಆರ್.ವಿ.ಎನ್.ಶರ್ಮಾ ನೈಋತ್ಯ ರೈಲ್ವೆ ಮುಖ್ಯ ಜನರಲ್ ಇಂಜಿನಿಯರ್ ಮಹೇಶ್ ಕುಮಾರ್ ಉಪಸ್ಥಿತರಿದ್ದರು.
ವಲಯ ರೈಲ್ವೆಯು ಪರಿಶೋಧನೆಯ ಸಮಯದಲ್ಲಿ ಮಾಡಿದ ಅವಲೋಕನಗಳ ಕುರಿತು, ಸುರಕ್ಷತಾ ಪರಿಶೋಧನಾ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bakrid ಹಿನ್ನೆಲೆ: ಬೆಂಗಳೂರು ರಸ್ತೆ ಬದಿ ಕುರಿ ಬೆಲೆ ಕೇಳಿದ್ರೇ ಶಾಕ್ ಆಗ್ತೀರಿ, Video

Operation Sindoor: ವಿವಾದಾತ್ಮಕ ಪೋಸ್ಟ್ ಬೆನ್ನಲ್ಲೇ ಗುಜರಾತ್‌ ಕಾಂಗ್ರೆಸ್‌ ನಾಯಕ ರಾಜೇಶ್ ಸೋನಿ ಅರೆಸ್ಟ್‌

ತುಂಡು ಬಟ್ಟೆ ನಮ್ಮ ಸಂಸ್ಕೃತಿಯಲ್ಲ, ನಾನು ಒಪ್ಪಲ್ಲ: ಬಿಜೆಪಿ ನಾಯಕ ಕೈಲಾಶ್‌

Bengaluru Stampede, ಡಿಸಿಎಂ ಕ್ರೆಡಿಟ್ ಪಡೆಯಲು ಹೋಗಿ ಈ ಅನಾಹುತ ನಡೆದಿದೆ: ನಿಖಿಲ್ ಕುಮಾರಸ್ವಾಮಿ

Govindraj: ವಿಧಾನಸೌಧದಲ್ಲಿ ಆರ್ ಸಿಬಿ ಕಾರ್ಯಕ್ರಮ ಮಾಡಲು ಒತ್ತಡ ಹೇರಿದ್ದೇ ಇವರು

ಮುಂದಿನ ಸುದ್ದಿ
Show comments