Select Your Language

Notifications

webdunia
webdunia
webdunia
webdunia

ಓಲಾ ಉಬರ್ ಗೆ ಸಡ್ಡು, ನಮ್ಮ ಯಾತ್ರಿ ಎನ್ನುವ ಯಾಪ್ ರಚಿಸಿದ ನಗರದ ಆಟೋ ಚಾಲಕರು

ಓಲಾ ಉಬರ್ ಗೆ ಸಡ್ಡು,  ನಮ್ಮ ಯಾತ್ರಿ  ಎನ್ನುವ ಯಾಪ್ ರಚಿಸಿದ  ನಗರದ ಆಟೋ ಚಾಲಕರು
bangalore , ಸೋಮವಾರ, 31 ಅಕ್ಟೋಬರ್ 2022 (14:19 IST)
ನಾಳೆಯಿಂದ ಅಧಿಕೃತವಾಗಿ  ನಮ್ಮ ಯಾತ್ರಿ ಯಾಪ್ ಶುರುವಾಗಲಿದೆ.ಕಳೆದೆರಡು ದಿನಗಳಿಂದ ಪ್ರಾಯೋಗಿಕವಾಗಿ ಜಾರಿಯಾಗಿದೆ.ಇದರಲ್ಲಿ ಆಟೋ ಆಯ್ಕೆಗೆ ಅವಕಾಶ ಇದೆ.ನವೆಂಬರ್ 01 ರಿಂದ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು,ಓಲಾ ಉಬರ್ ಹಾಗೂ ರ್ಯಾಪಿಡ್ ಗಳ ದುಬಾರಿ ದರದಿಂದ ಜನರು ಬೇಸತ್ತಿದರು.ಆದ್ರೆ ಇದೀಗ  ರಾಜ್ಯ ಸರ್ಕಾರ ನಿಗಿಪಡಿಸಿದ ಮಿನಿಮಮ್ 30 ರೂಪಾಯಿ ಹಾಗೂ ಪ್ರತಿ ಕಿಮೀ 15 ರೂಪಾಯಿ ಹಾಗೂ ಮನೆಯವರೆಗೆ ಡ್ರಾಪ್ ನೀಡುವುದರಿಂದ ಸೇವಾ ಶುಲ್ಕ 10 ರೂ ಹೆಚ್ಚುವರಿಯಾಗಿ ಗ್ರಾಹಕರಿಂದ ಪಡೆದುಕೊಳ್ಳಲು ಈ ಆ್ಯಪ್ ನಿರ್ಧಾರ ಮಾಡಿದೆ.
 
ಗ್ರಾಹಕರಿಗೆ ಅವರ ಸಮೀಪದ ಸ್ಥಳದಲ್ಲಿ 4 ರಿಂದ 5 ಆಟೋ ಚಾಲಕರ ವಿವರ ಆ್ಯಪ್ ನಲ್ಲಿ ನಮೂದಿಸಿರುತ್ತೆ.ಪ್ರಯಾಣಿಕರು ತಮಗೆ ಬೇಕಾದ ಆಟೋ ವನ್ನು ಆಯ್ಕೆ ಮಾಡಿಕೊಳ್ಳಬಹುದು.ಪ್ರಯಾಣಿಕರು ಬುಕಿಂಗ್ ರದ್ದುಗೊಳಿಸಿದರೆ ಯಾವುದೇ ದಂಡ ಇಲ್ಲ.ಕಳೆದೆರಡು ವಾರಗಳಿಂದ 10 ಸಾವಿರ  ಜನ ಯಾತ್ರಿ ಯಾಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ.ಈ ಯಾಪ್ ನಲ್ಲಿ ಆಟೋ ಹೊರತಾಗಿ ಬೇರೆ ಸೇವೆ ಇರುವುದಿಲ್ಲ ಎಂದು ಆಟೋ ಚಾಲಕರೊಬ್ಬರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಂಟ್ರಲ್‌ ಟ್ರೈನ್‌ಗಳಲ್ಲಿ ರೈಲ್‌ ನೀರ್‌ ಪೂರೈಕೆ ನಿಲ್ಲಿಸಿದ IRTC