Daily Horoscope

Select Your Language

Notifications

webdunia
webdunia
webdunia
webdunia

ಮತಪಟ್ಟಿ ಪರಿಷ್ಕರಣೆಯ ಮತ್ತೊಂದು ಕರ್ಮಕಾಂಡ ಬಯಲು: ಸಾರಾ ಮಹೇಶ್ ಗಂಭೀರ ಆರೋಪ

SA RA Mahesh
ಬೆಂಗಳೂರು: ಮತಪಟ್ಟಿ ಪರಿಷ್ಕರಣೆಯ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಮಾಜಿ ಸಚಿವ ಸಾ ರಾ ಮಹೇಶ್ ಮತ್ತೊಂದು ಅಕ್ರಮ ಬಹಿರಂಗಪಡಿಸಿದ್ದಾರೆ.

ಕರ್ನಾಟಕದಲ್ಲಿ ಕೇಂದ್ರ ಚುನಾವಣಾ ಆಯೋಗ ಮತಪಟ್ಟಿ ಪರಿಷ್ಕರಣೆ ಮಾಡಲು ಹೇಳಿತ್ತು. ಮೊನ್ನೆಯಿಂದ ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭವಾಗಿದೆ. ಆದರೆ ಇದರಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ ಎಂದು ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಫೋಟೋ, ವಿಡಿಯೋಗಳ ಸಮೇತ ಬಯಲು ಮಾಡುತ್ತಿದೆ.

ವಿಶೇಷವಾಗಿ ಮಸೀದಿಗಳ ಮುಂಭಾಗ, ಕೆಲವು ಕಡೆ ಟೆಂಟ್ ಹಾಕಿಕೊಂಡು ಮತಪಟ್ಟಿ ಪರಿಷ್ಕರಣೆ ಅಕ್ರಮವಾಗಿ ಮಾಡಲಾಗುತ್ತಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಆರೋಪಿಸಿದೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದೆ.

ಇದರ ಬೆನ್ನಲ್ಲೇ ಈಗ ಮಾಜಿ ಸಚಿವ ಸಾ ರಾ ಮಹೇಶ್ ಕೆಲವು ಕಡೆ ಬಿಎಲ್ಒಗಳೇ ತಲಾ 50 ರೂ.ನಂತೆ ದುಡ್ಡು ತೆಗೆದುಕೊಂಡು ಕಾರ್ಯಕರ್ತರಿಂದ ಅರ್ಜಿ ಭರ್ತಿ ಮಾಡಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರತೀ ಮನೆಗೆ ಹೋಗಲು ಬಿಎಲ್ಒಗಳು ಉದಾಸೀನ ಪ್ರವೃತ್ತಿ ತೋರುತ್ತಿದ್ದಾರೆ. ಇದಕ್ಕಾಗಿ 50 ರೂ. ಕೊಟ್ಟು ಕಾರ್ಯಕರ್ತರಿಂದಲೇ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.


ಕೇಂದ್ರ ಚುನಾವಣಾ ಆಯೋಗ ಪ್ರತೀ ಮನೆಗೆ ಹೋಗಿ ಬಿಎಲ್ಒಗಳು ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಿದೆ. ಆದರೆ ಇಲ್ಲಿ ನಿಯಮಗಳು ಪಾಲನೆಯಾಗುತ್ತಿಲ್ಲ. ಬದಲಾಗಿ ಅಕ್ರಮವೆಸಗಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಹೀಗಿದ್ದರೆ ಮತಪಟ್ಟಿ ಪರಿಷ್ಕರಣೆ ಮಾಡುವುದರ ಫಲಾವದರೂ ಏನು ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ