ನಮ್ಮ ಸರ್ಕಾರ ಇರುವವರೆಗೂ ಸಿದ್ದರಾಮಯ್ಯನೇ ಸಿಎಂ: ಉಲ್ಟಾ ಹೊಡೆದ ಆರ್ ವಿ ದೇಶಪಾಂಡೆ

Krishnaveni K
ಮಂಗಳವಾರ, 10 ಸೆಪ್ಟಂಬರ್ 2024 (17:39 IST)
ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ತೆರೆಮರೆಯಲ್ಲೇ ಫೈಟ್ ನಡೆಯುತ್ತಿರುವ ಬೆನ್ನಲ್ಲೇ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಸರ್ಕಾರ ಇರುವವರೆಗೂ ಸಿದ್ದುನೇ ಸಿಎಂ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಕಂಟಕ ಎದುರಾದ ಬೆನ್ನಲ್ಲೇ ಕಾಂಗ್ರೆಸ್ ನ ಕೆಲವು ನಾಯಕರು ಸಿಎಂ ಬದಲಾವಣೆಗೆ ಕಸರತ್ತು ಆರಂಭಿಸಿದ್ದಾರೆ. ಈ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ನಿಂದ ಆದೇಶ ಬಂದರೂ ಕ್ಯಾರೇ ಎನ್ನದೇ ನಾಯಕರು ತಮ್ಮ ಪಾಡಿಗೆ ತಾವಿದ್ದಾರೆ.

ಈ ನಡುವೆ ಸಿಎಂ ಸ್ಥಾನಕ್ಕೆ ಟವೆಲ್ ಹಾಕಿಕೊಂಡಿರುವ ಅನೇಕ ನಾಯಕರು ಒಳಗೊಳಗೇ ತಮ್ಮ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಒಳಗೊಳಗೇ ರಹಸ್ಯ ಸಭೆಗಳು ನಡೆಯುತ್ತಿವೆ. ಇತ್ತೀಚೆಗೆ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಕೂಡಾ ನನಗೆ ಸಿಎಂ ಆಗುವ ಆಸೆಯಿದೆ ಎಂದಿದ್ದರು.

ಆದರೆ ಈಗ ಹೈಕಮಾಂಡ್ ನಿಂದ ಎಚ್ಚರಿಕೆ ಬಂದ ಬೆನ್ನಲ್ಲೇ ದೇಶಪಾಂಡೆ ಉಲ್ಟಾ ಹೊಡೆದಿದ್ದಾರೆ. ನಮ್ಮಲ್ಲಿ ಸಿಎಂ ಸ್ಥಾನ ಖಾಲಿಯಿಲ್ಲ. ನಮ್ಮಸರ್ಕಾರ ಇರುವವರೆಗೂ ಸಿದ್ದರಾಮಯ್ಯನೇ ಸಿಎಂ ಆಗಿರುತ್ತಾರೆ. ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂದಿದ್ದಾರೆ. ಆ ಮೂಲಕ ಸಿಎಂ ಬದಲಾವಣೆ ಕುರಿತು ತಮ್ಮ ಹೇಳಿಕೆಯಿಂದ ಹಿಂದೆ ಸರಿದಂತೆ ಕಾಣುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇವಸ್ಥಾನ, ಚರ್ಚ್‌ಗಳಂತೆ ಮಸೀದಿಗಳಲ್ಲೂ ಸಿಸಿಟಿವಿ ಅಳವಡಿಸಿ: ಬಿಜೆಪಿ ಸಂಸದ ಅರುಣ್ ಒತ್ತಾಯ

ಭರತನಾಟ್ಯ ಪ್ರದರ್ಶಿಸುತ್ತಲೇ ಅಂಜನಾದ್ರಿ ಬೆಟ್ಟ ಏರಿದ ನಾಟ್ಯ ಕಲಾವಿದೆ

ಮಾದಕ ವ್ಯಸನದ ಜಾಗೃತಿಗಾಗಿ ಬೆಂಗಳೂರಿನಲ್ಲಿ ವಿಶೇಷ ರ್ಯಾಲಿ‌, ಇಲ್ಲಿದೆ ಮಾಹಿತಿ

ಮದುವೆ ದಿನ ತಮಾಷೆ ನೆಪದಲ್ಲಿ ವಧು, ವರನಿಗೆ ಇದೆಂಥಾ ಗತಿ: Viral video

ಯುಪಿ ಯೋಗಿ ಆದಿತ್ಯನಾಥ್‌ಗೆ ಪ್ರಾಣಿಗಳೆಂದರೆ ಎಷ್ಟು ಪ್ರೀತಿ, ಈ ಫೋಟೋನೇ ಸಾಕ್ಷಿ

ಮುಂದಿನ ಸುದ್ದಿ
Show comments