Select Your Language

Notifications

webdunia
webdunia
webdunia
webdunia

ಬರಸ್ಥಿತಿ ನಿರ್ವಹಣೆ ಪ್ರತೀ ತಾಲೂಕಿಗೆ ರೂ.1.65 ಕೋಟಿ

ಬರ ನಿರ್ವಹಣೆ
Bangalore , ಗುರುವಾರ, 23 ಫೆಬ್ರವರಿ 2017 (22:36 IST)
ಪ್ರತೀ ಬರ ಪೀಡಿತ ತಾಲ್ಲೂಕುಗಳಿಗೆ ಈವರಗೆ ತಲಾ ರೂ.1.65 ಕೋಟಿ ಒದಗಿಸಲಾಗಿದೆ, ಇದಲ್ಲದೆ 14ನೇ ಹಣಕಾಸು ಆಯೋಗದಿಂದ ಜಿಲ್ಲೆಗೆ 54ಕೋಟಿ ರೂಪಾಯಿ ಒದಗಿಸಲಾಗಿದೆ ಅದನ್ನು‌ಸದ್ಬಳಕೆ ಮಾಡಿಕೊಂಡು ನೀರಿನ‌ ಸಮಸ್ಯೆ ನಿಬಾಯಿಸಿ‌ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಎ ಮಂಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
 
ಸಾಧ್ಯವಾದಷ್ಟು ಮಟ್ಟಿಗೆ ಶಾಶ್ವತ ನೀರು ಸರಬರಾಜು ಯೋಜನೆಗಳನ್ನು ಜಾರಿಗೊಳಿಸಿ‌ ಎಂದು ‌ಸಚಿವರು ಹೇಳಿದರು. ಹಾಸನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಿತು.
 
ಇದೇ ಸಂದರ್ಭದಲ್ಲಿ ಅವರು ಹಾಸನ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಕುಡಿಯುವ ನೀರು ಸರಬರಾಜು ಕಾಮಗಾರಿಗಳಿಗೆ ಯಾವುದೇ ಅನುದಾನದ ಕೊರತೆ ಇಲ್ಲ. ಅಗತ್ಯ ಇರುವ ಕಡೆ ಲಭ್ಯ ಮೂಲಗಳಿಂದ ನೀರಿನ ಪೂರೈಕೆ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಹಾಸನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೆದ್ದಾರಿಯಲ್ಲೇ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ ಪೈಲಟ್