Select Your Language

Notifications

webdunia
webdunia
webdunia
webdunia

ಹವಾ ಮೆಂಟೈನ್ ಗಾಗಿ ರೌಡಿಶೀಟರ್ ನ ಕೊಲೆ ಮಾಡಿದ್ರು, ಪೊಲೀಸರ ಅತಿಥಿಯಾದ್ರು!

ಹವಾ ಮೆಂಟೈನ್ ಗಾಗಿ ರೌಡಿಶೀಟರ್ ನ ಕೊಲೆ ಮಾಡಿದ್ರು, ಪೊಲೀಸರ ಅತಿಥಿಯಾದ್ರು!
ಆನೇಕಲ್ , ಸೋಮವಾರ, 30 ಜುಲೈ 2018 (16:51 IST)
ಜುಲೈ 1 ರಂದು ನಡೆದಿದ್ದ ಅತ್ತಿಬೆಲೆಯ ರೌಡಿಶೀಟರ್ ಜಯಂತ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬೆಸ್ತಮಾನಹಳ್ಳಿ ಸುನೀಲ್ನನ್ನ ಅತ್ತಿಬೆಲೆ ಪೊಲೀಸರು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸಕೊಟೆಯಲ್ಲಿ ಅತ್ತಿಬೆಲೆ ಸಿಪಿಐ ರಾಜೇಶ್ ನೇತೃತ್ವದಲ್ಲಿ ಸುನೀಲ್ನ್ನ ಬಂಧಿಸಿದ್ದಾರೆ. ರೌಡಿಶೀಟರ್ ಜಯಂತ್ ಜೊತೆ ಪದೇ ಪದೇ ಜಗಳವಾಡುತ್ತಿದ್ದ ಸುನೀಲ್ ಆತನನ್ನ ಜುಲೈ 1 ರಂದು ಕರೆ ಮಾಡಿ ಮಾತನಾಡಲು ಕರೆಸಿಕೊಂಡಿದ್ದ. ಮದ್ಯಪಾನ ಮಾಡಿದ್ದ ಇಬ್ಬರ ನಡುವೆ ಜಗಳವಾಗಿ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು. ಬಳಿಕ ಆತನ ಮೃತ ದೇಹವನ್ನ ಆನೇಕಲ್ ಬಳಿಯ ಸಮಂದೂರು ಬಳಿಯ ನೀಲಗಿರಿ ತೋಪಿನಲ್ಲಿ ಬಿಸಾಡಿ ಅಲ್ಲಿಂದ ಪರಾರಿಯಾಗಿದ್ದರು.

ಪ್ರಕರಣ ಮೂವರು ಆರೋಪಿಗಳಾದ ಬೆಸ್ತಮಾನಹಳ್ಳಿ ಸುನೀಲ್ , ಲೋಕೇಶ್ ಹಾಗೂ ಪ್ರವೀಣ್ ಎಂಬುವವನ್ನ ಬಂಧಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿಕೊಡಲಾಗಿದೆ, ಏರಿಯಾದಲ್ಲಿ ಹವಾ ಮೈನ್ಟೈನ್ ಮಾಡಲು ಜಯಂತ್ ಕೊಲೆ ಮಾಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್. ಪಿ. ಶಿವಕುಮಾರ್ ಬಗ್ಗೆ ಮಾಹಿತಿ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ದಿ.ಎಸ್.ಬಂಗಾರಪ್ಪನವರ ಶಿಷ್ಯನ ಭೀಕರ ಕೊಲೆ