ಮಹಿಳೆಯ ಕಾಲು ಕಟ್ಟಿ ರಾಬರಿ

Webdunia
ಶನಿವಾರ, 17 ಸೆಪ್ಟಂಬರ್ 2022 (19:56 IST)
ಮೈಸೂರಿನಲ್ಲಿ ಹಾಡು ಹಗಲೇ ದರೋಡೆ ನಡೆದಿದೆ. ಮಹಿಳೆಯನ್ನು ಕಟ್ಟಿಹಾಕಿ ಚಿನ್ನ ದೋಚಿ ಖದೀಮರು ಪರಾರಿಯಾದ ಘಟನೆ ಮೈಸೂರಿನ ನಂಜನಗೂಡಿನ ರಾಮಸ್ವಾಮಿ ಬಡಾವಣೆ ಒಂದನೇ ಬ್ಲಾಕ್​​​ನಲ್ಲಿ ನಡೆದಿದೆ. ಪ್ರೌಢಶಾಲಾ ಶಿಕ್ಷಕ ಶಂಭುಸ್ವಾಮಿ ಎಂಬುವವರ ಪತ್ನಿ ದಾಕ್ಷಾಯಿಣಿ ಚಿನ್ನ ಕಳೆದುಕೊಂಡು ಮಹಿಳೆಯಾಗಿದ್ದಾರೆ. ಡೂಪ್ಲಿಕೇಟ್ ಪಾರ್ಸಲ್ ಬಾಕ್ಸ್  ಹಿಡಿದು ಬಂದು ಕಳ್ಳರು, ಪಾರ್ಸಲ್ ಬಂದಿದೆ ಎಂದು ಬಾಗಿಲು ತೆಗೆಯಿಸಿ ಎಂದಿದ್ದಾನೆ. ನಂತರ ಮಹಿಳೆಯನ್ನು ಬೆದರಿಸಿ ಕೈಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಅಂಟಿಸಿ ದರೋಡೆ ಮಾಡಿದ್ದಾರೆ. ಮಹಿಳೆಯ ಮೈ ಮೇಲಿದ್ದ ಚಿನ್ನದ ಮಾಂಗಲ್ಯ ಸರ, ಕೈ ಬಳೆ, ಉಂಗುರ ದೋಚಿ ಪರಾರಿಯಾಗಿದ್ದಾರೆ, ಬೀರುವಿನಲ್ಲಿದ್ದಒಂದು ಜೊತೆ ಕೈ ಬಳೆ, ನೆಕ್ಲೆಸ್ ಸೇರಿ ಒಟ್ಟು 175 ಗ್ರಾಂಗೂ ಅಧಿಕ ಚಿನ್ನದ ಒಡವೆ ದೋಚಿ ಪರಾರಿಯಾಗಿದ್ದಾರೆ. ಮಹಿಳೆ ಒಬ್ಬರೇ ಮನೆಯಲ್ಲಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರೂರ್ ಕಾಲ್ತುಳಿತ: ಸಂತ್ರಸ್ತರ ಭೇಟಿಗೆ ವ್ಯವಸ್ಥೆ ಮಾಡಿದ ನಟ ವಿಜಯ್

ಯಮುನಾ ನೀರು ಶುದ್ಧವಾಗಿದೆಯೆಂದ ರೇಖಾ ಗುಪ್ತಾ ಕುಡಿದು ತೋರಿಸಲಿ: ಆ್ಯಪ್ ಸವಾಲು

7 ವರ್ಷದ ಬಾಲಕಿಯನ್ನು ಕೊಚ್ಚಿ ಕೊಂದ ಮಲತಂದೆ, ಕಾರಣ ಕೇಳಿದ್ರೆ ಶಾಕ್‌

ಉ.ಪ್ರದೇಶ: 5 ದೇವಸ್ಥಾನದ ಗೋಡೆಯಲ್ಲಿ ಐ ಲವ್ ಮುಹಮ್ಮದ್ ಬರಹ, ಉದ್ವಿಗ್ನ ವಾತಾವರಣ ಸೃಷ್ಟಿ

Kurnool Bus Accident: ಡಿಕ್ಕಿ ಹೊಡೆದ ಬೈಕ್ ಸವಾರರ ವಿಡಿಯೋ ವೈರಲ್

ಮುಂದಿನ ಸುದ್ದಿ
Show comments