Webdunia - Bharat's app for daily news and videos

Install App

ಪಾಳು ಬಿದ್ದ ಬಾವಿಯಲ್ಲಿ ನವಜಾತ ಶಿಶು..!

Webdunia
ಶನಿವಾರ, 17 ಸೆಪ್ಟಂಬರ್ 2022 (19:47 IST)
ಮಂಡ್ಯ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದ ಪಾಳು ಬಾವಿಯಲ್ಲಿ ನವಜಾತ ಗಂಡು ಶಿಶು ಪತ್ತೆಯಾಗಿದೆ. ದುಷ್ಕರ್ಮಿಗಳು ರಸ್ತೆ ಬದಿಯ 30 ಅಡಿ ಆಳದ ಪಾಳು ಬಾವಿಗೆ ಶಿಶು ಎಸೆದು ಹೋಗಿದ್ದಾರೆ. ಗ್ರಾಮದ ದಾರಿ ಹೋಕರಿಗೆ ಶಿಶು ಆಕ್ರಂದನದ ಸದ್ದು ಕಿವಿಗೆ ಬಿದ್ದಿದೆ. ಈ ವೇಳೆ ಸ್ಥಳೀಯರು ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ನವಜಾತ ಶಿಶು ರಕ್ಷಣೆ ಮಾಡಿದ್ದಾರೆ. ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ. ಕಸ ಕಡ್ಡಿಯೇ ತುಂಬಿದ್ದ ಪಾಳುಬಾವಿಯಲ್ಲಿ ಬಿದ್ದಿದ್ದರೂ ಪವಾಡ ಸದೃಶ್ಯ ರೀತಿಯಲ್ಲಿ ನವಜಾತ ಶಿಶು ಬದುಕುಳಿದಿದೆ. ಆಗ ತಾನೇ ಜನಿಸಿರುವ ಗಂಡು ಮಗವನ್ನು ಪಾಳು ಬಾವಿಗೆ ಎಸೆದಿದ್ದು ತಾಯಿ ಕೃತ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ. ಶಿಶುವಿನ ಮುಖ ಮತ್ತು ದೇಹದ ಕೆಲವು ಭಾಗಗಳಲ್ಲಿ ಇರುವೆ ತುಂಬಿದ್ದು, ಇರುವೆ ಕಚ್ಚಿರುವ ಗುರುತುಗಳಾಗಿವೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಕೀಯ ಅಸ್ತ್ರವಾದ '80s AI ಫೋಟೋ ಟ್ರೆಂಡ್': ಕಾಂಗ್ರೇಸ್ ಬಿಜೆಪಿ ನಡುವೆ ಪೋಸ್ಟರ್ ವಾರ್

ರಸ್ತೆಯಲ್ಲಿ ಕಾದಾಟುತ್ತಿದ್ದ ಹೋರಿಗಳು ಅಂಗಡಿಯೊಳಗೆ ನುಗ್ಗಿದ್ದರಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಜಖಂ, Video

ತರಗತಿಯಲ್ಲಿ ಕೂರುವ ಸ್ಥಳದ ವಿಚಾರವಾಗಿ ಕ್ಲಾಸ್‌ಮೇಟ್‌ಗಳ ನಡುವೆ ಹೇಗೆ ಜಗಳ ನಡೆಯಿತು ನೋಡಿ

ಡಿಕೆಶಿ ಆಡಳಿತಕ್ಕೆ ಶತಕದ ಸಂಭ್ರಮ: ರಾಜ್ಯದ ಅವೃದ್ಧಿಗೆ ಮೂರು ಮಹಾ ಸಂಕಲ್ಪ ಘೋಷಿಸಿದ ಸಿಎಂ ಶಿವಕುಮಾರ್‌

ಗಲ್ವಾನ್ ಸಂಘರ್ಷದ ಬಳಿಕ ಮೊದಲ ಬಾರಿ ಭಾರತಕ್ಕೆ ಚೀನಾ ಅಧ್ಯಕ್ಷ: ಗರಿಗೆದರಿದ ದ್ವಿಪಕ್ಷೀಯ ಮಾತುಕತೆ

ಮುಂದಿನ ಸುದ್ದಿ
Show comments