Select Your Language

Notifications

webdunia
webdunia
webdunia
webdunia

ಪದವೀಧರರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ

ಪದವೀಧರರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ
ಬೆಂಗಳೂರು , ಭಾನುವಾರ, 13 ಆಗಸ್ಟ್ 2023 (12:54 IST)
ಬೆಂಗಳೂರು : ರಾಜೀನಾಮೆ ಮತ್ತು ನಿವೃತ್ತಿಯಿಂದ ತೆರವಾಗುತ್ತಿರುವ ವಿಧಾನಪರಿಷತ್ತಿನ ಕೆಲವು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗ ನೈಋತ್ಯ ಪದವೀಧರ ಕ್ಷೇತ್ರದ ಆಯನೂರು ಮಂಜುನಾಥ್ ಅವರ ರಾಜೀನಾಮೆಯಿಂದಾಗಿ 19-4-2023 ತಾರೀಖಿನಿಂದ ಸ್ಥಾನ ತೆರವಾಗಿದ್ದು, ಈ ಕ್ಷೇತ್ರಕ್ಕೆ ಚುನಾವಣೆ ನಡೆದಿಲ್ಲ. ಈ ಸ್ಥಾನದ ಅವಧಿ 21-06-2024ರವರೆಗೆ ಇದೆ.
 
ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪುಟ್ಟಣ್ಣ ಅವರ ರಾಜೀನಾಮೆಯಿಂದಾಗಿ 16-03-2023 ತಾರೀಖಿನಿಂದ ತೆರವಾಗಿರುವ ಕ್ಷೇತ್ರಕ್ಕೆ ಚುನಾವಣೆ ನಡೆದಿಲ್ಲ. ಈ ಸ್ಥಾನದ ಅವಧಿ 11-11-2026ರವರೆಗೆ ಇದೆ. 

21-06-2024ಕ್ಕೆ ಈಶಾನ್ಯ ಪದವೀಧರ ಕ್ಷೇತ್ರದಿಂದ ಡಾ. ಚಂದ್ರಶೇಖರ ಬಿ. ಪಾಟೀಲ್, 21-06-2024ಕ್ಕೆ ಬೆಂಗಳೂರು ಪದವೀಧರ ಕ್ಷೇತ್ರದಿಂದ ಎ.ದೇವೇಗೌಡ, 21-06-2024ಕ್ಕೆ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಡಾ.ವೈ.ಎ.ನಾರಾಯಣ ಸ್ವಾಮಿ, 21-06-2024ಕ್ಕೆ ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಎಸ್.ಎಲ್. ಭೋಜೆಗೌಡ, 21-06-2024ಕ್ಕೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮರಿತಿಬ್ಬೇಗೌಡ ನಿವೃತ್ತಿಯಾಗುತ್ತಿದ್ದಾರೆ. 

ಮತದಾರರ ಪಟ್ಟಿ ಪರಿಷ್ಕರಣೆಗೆ ಸಾರ್ವಜನಿಕ ನೋಟಿಸ್ ಅನ್ನು ಸೆ.30 ರಂದು ಪ್ರಕಟಣೆ ಮಾಡಬೇಕಾಗಿದೆ. ಫಾರಂ 18 ಅಥವಾ 19ರಲ್ಲಿ ಅರ್ಜಿ ಸ್ವೀಕರಿಸಲು ನ.06 ಕೊನೆಯ ದಿನವಾಗಿದೆ. ಮತದಾರರ ಕರಡು ಪ್ರತಿ ಪ್ರಕಟಿಸುವ ದಿನ ನ.23, ಮತದಾರರ ಪಟ್ಟಿ ಪ್ರಕಟಣೆ ದಿನ ನ.23, ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸ್ವೀಕರಿಸಲು ನ.23 ರಿಂದ ಡಿ.09 ರವರೆಗೆ ಅವಕಾಶವಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿಗೆ ನೀರು ಬಿಡಲು ಕಾವೇರಿ ಪ್ರಾಧಿಕಾರ ಸೂಚನೆ