ಆರೋಗ್ಯಕರ ಕೆಲಸದ ವಾತಾವರಣ, ತಕ್ಕಂಥ ಸಂಬಳ ಮತ್ತು ಸಾಮರ್ಥ್ಯ, ಕನಸುಗಳಿಗೆ ಪೂರಕವಾದ ಕೆಲಸ ಸಿಗದೇ ಇದ್ಧಾಗ. ಹೀಗಿದ್ದಾಗಲೂ ಕೆಲವರು ವೈಯಕ್ತಿಕ ಕಾರಣಗಳನ್ನು ಬರೆದು ರಾಜೀನಾಮೆ ಸಲ್ಲಿಸುತ್ತಾರೆ.
ಇನ್ನೂ ಕೆಲವರು ಕಚೇರಿಯಲ್ಲಿ ತಮಗಾದ ನೋವು ಬೇಸರವನ್ನು ವ್ಯಕ್ತಪಡಿಸಿ ರಾಜೀನಾಮೆ ಕೊಡುತ್ತಾರೆ. ಮತ್ತೂ ಕೆಲವರು ಕೊಡಬೇಕಾದುದನ್ನು ಶಾಲ್ನಲ್ಲಿ ಸುತ್ತಿ ಕೊಟ್ಟು, ಅಲ್ಲಿಯೂ ತಮ್ಮ ಸೃಜಶೀಲತೆ ಮೆರೆಯುತ್ತಾರೆ. ಇದೀಗ ಟ್ವಿಟರ್ನಲ್ಲಿ ವೈರಲ್ ಆಗುತ್ತಿರುವ ರಾಜೀನಾಮೆ ಪತ್ರ ಕೊನೆಯ ವರ್ಗಕ್ಕೆ ಸೇರಿದ್ದು.
ಸ್ವಿಗ್ಗಿ ಇನ್ಸ್ಟಾಮಾರ್ಟ್ ಸ್ವತಃ ಈ ರಾಜೀನಾಮೆ ಪತ್ರವನ್ನು ಟ್ವೀಟ್ ಮಾಡಿದೆ. ಸಾಮಾನ್ಯವಾಗಿ ಅನೇಕರು ರಾಜೀನಾಮೆ ಪತ್ರ ಬರೆಯಲು ಟೆಂಪ್ಲೆಟ್ಗಾಗಿ ಗೂಗಲ್ನ ಮೊರೆ ಹೋಗುವುದುಂಟು.
ಪ್ರತಿಭೆ, ನಿಷ್ಠೆ, ಶ್ರದ್ಧೆಯುಳ್ಳ ಉದ್ಯೋಗಿ ಏನೇ ಮಾಡಿದರೂ ಅದಕ್ಕೆ ಸೃಜನಶೀಲ ಸ್ಪರ್ಶವಿದ್ದೆ ಇರುತ್ತದೆ. ಈ ಪತ್ರದಲ್ಲಿ ಇನ್ಸ್ಟಾನಲ್ಲಿ ಸಿಗುವ ನಿತ್ಯಬಳಕೆಯ ವಸ್ತುಗಳನ್ನು ಉಪಯೋಗಿಸಿ ರೀಬಸ್ ಸ್ಟೋರಿ ಮಾದರಿಯಲ್ಲಿ ಅರ್ಥಪೂರ್ಣವಾಗಿ ವಿನ್ಯಾಸ ಮಾಡಲಾಗಿದೆ. ಹೀಗಿದ್ದಮೇಲೆ ನೆಟ್ಟಿಗರಿಗೆ ಪ್ರತಿಕ್ರಿಯಿಸಲು ಉತ್ಸಾಹ ಉಕ್ಕದೇ ಇದ್ದೀತೇ?
ಎರಡು ದಿನಗಳ ಹಿಂದೆ ಇದನ್ನು ಟ್ವೀಟ್ ಮಾಡಲಾಗಿದ್ದು, ಸುಮಾರು 90,000 ಕ್ಕೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. ಸುಮಾರು 2,000 ಜನರು ಲೈಕ್ ಮಾಡಿದ್ದಾರೆ. 240 ಜನರು ರೀಟ್ವೀಟ್ ಮಾಡಿದ್ದಾರೆ. ಈ ಸೃಜನಶೀಲತೆ ಔಟ್ ಆಫ್ ದಿ ಬಾಕ್ಸ್ ಎಂದಿದ್ದಾರೆ ಒಬ್ಬರು. ಇದು ಬಹಳ ಮುದ್ದಾದ ಪತ್ರ ಎಂದು ಇನ್ನೊಬ್ಬರು. ಇವರ ರೆಸ್ಯೂಮ್ ಹೇಗಿದ್ದಿರಬೇಡ!? ಎಂದು ಕೇಳಿದ್ದಾರೆ ಮತ್ತೊಬ್ಬರು.
ಹಾಗೆ ನೋಡಿದರೆ ಈ ಉದ್ಯೋಗಿಯನ್ನು ಕಂಪೆನಿಯು ಕಳೆದುಕೊಳ್ಳಬಾರದು, ಏಕೆಂದರೆ ರಾಜೀನಾಮೆ ಪತ್ರವನ್ನೇ ಇಷ್ಟು ಸೃಜನಶೀಲತೆಯಿಂದ ಬರೆದಿದ್ದಾರೆ ಎಂದರೆ ಅವರೊಳಗಿನ ಸಾಮರ್ಥ್ಯ ಮತ್ತು ಶ್ರದ್ಧೆಯನ್ನು ಗಮನಿಸಬೇಕು.