Select Your Language

Notifications

webdunia
webdunia
webdunia
webdunia

ಮತ್ತೆ ಕರ್ನಾಟಕದಲ್ಲಿ ರೆಸಾರ್ಟ್ ರಾಜಕೀಯ

ಮತ್ತೆ ಕರ್ನಾಟಕದಲ್ಲಿ ರೆಸಾರ್ಟ್ ರಾಜಕೀಯ
ಬೆಂಗಳೂರು , ಶುಕ್ರವಾರ, 12 ಮೇ 2023 (20:03 IST)
ಬೆಂಗಳೂರು : ಈ ಬಾರಿ ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ ಮತ್ತೆ ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ಶುರುವಾಗುವ ಸಾಧ್ಯತೆಯಿದೆ.

ಈಗಾಗಲೇ ಚುನಾವಣೆಯಲ್ಲಿ ಗೆಲ್ಲುವ ಉತ್ಸಾಹದಲ್ಲಿ ಕಾಂಗ್ರೆಸ್ ಇದೆ. ಹೀಗಿದ್ದರೂ ದಾಖಲೆ ಪ್ರಮಾಣದಲ್ಲಿ ಮತದಾನ ನಡೆದಿರುವ ಕಾರಣ ಫಲಿತಾಂಶ ಏರುಪೇರಾಗುವ ಸಾಧ್ಯತೆಯಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ರಚನೆ ಮಾಡದೇ ಇರಲು ಈಗಲೇ ಕಾಂಗ್ರೆಸ್ ಪಕ್ಷೇತರರಿಗೆ ಗಾಳ ಹಾಕಿದೆ.  

ಪಕ್ಷೇತರರು ಅಲ್ಲದೇ ಆಪರೇಷನ್ ಕಮಲ ತಪ್ಪಿಸಲು ಅಭ್ಯರ್ಥಿಗಳ ಮೇಲೆ ಕಾಂಗ್ರೆಸ್ ನಿಗಾ ಇಟ್ಟಿದೆ. ಹೈದರಾಬಾದ್, ಬೆಂಗಳೂರಿಗೆ ಕೈ ಅಭ್ಯರ್ಥಿಗಳನ್ನು ಶಿಫ್ಟ್ ಮಾಡಲು ಪ್ಲಾನ್ ಮಾಡಲಾಗಿದೆ. ಪ್ರತಿ ಜಿಲ್ಲೆಗೆ ಇಬ್ಬಿಬ್ಬರು ಉಸ್ತುವಾರಿಗಳನ್ನು ಕಾಂಗ್ರೆಸ್ ನೇಮಕ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರ ಆರೋಪ ಮಾಡಿದ ಮಹಿಳೆಯನ್ನು ನಾನೆಂದೂ ಭೇಟಿಯಾಗಿಲ್ಲ : ಡೊನಾಲ್ಡ್ ಟ್ರಂಪ್