ವಾಷಿಂಗ್ಟನ್ : ಇತ್ತೀಚೆಗೆ ಅಮೆರಿಕದ ಬರಹಗಾರ್ತಿಯೊಬ್ಬರು 30 ವರ್ಷಗಳ ಹಿಂದೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪ ಹೊರಿಸಿದ್ದರು. ಈ ಆರೋಪ ಶುದ್ಧ ಸುಳ್ಳು,
ಯಾವುದೇ ಮಹಿಳೆಯನ್ನು ನಾನು ಎಂದೂ ಭೇಟಿಯಾಗಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಬುಧವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಅಮೆರಿಕದ ಮಾಜಿ ಅಧ್ಯಕ್ಷ, 1990ರ ದಶಕದಲ್ಲಿ ಡಿಪಾರ್ಟ್ಮೆಂಟ್ ಸ್ಟೋರ್ ಡ್ರೆಸ್ಸಿಂಗ್ ರೂಮ್ನಲ್ಲಿ ಬರಹಗಾರ್ತಿ ಇ ಜಿನ್ ಕ್ಯಾರೋಲ್ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಒಂದು ಕಟ್ಟು ಕಥೆ.
ಆ ಮಹಿಳೆಯ ಪರಿಚಯ ನನಗಿಲ್ಲ. ನಾನು ಆಕೆಯನ್ನು ಎಂದಿಗೂ ಭೇಟಿಯಾಗಿಲ್ಲ. ಆಕೆ ಯಾರೆಂಬುದೇ ನನಗೆ ತಿಳಿದಿಲ್ಲ ಎಂದಿದ್ದಾರೆ. ನಾನು ನನ್ನ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಅಂತಹ ಕೃತ್ಯ ನಾನು ಎಂದಿಗೂ ಮಾಡಿಲ್ಲ. ಆ ಮಹಿಳೆ ಯಾರೆಂದು ನನಗೆ ತಿಳಿದಿಲ್ಲ ಇದೊಂದು ಕಟ್ಟುಕಥೆ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.