ಮೈಸೂರು: ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ, ಯಡಿಯೂರಪ್ಪ ಅವರನ್ನು ಅನುಕರಣೆ ಮಾಡಿ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತುರೋ ಅಥವಾ ಅರವಿಂದ ಕೇಜ್ರಿವಾಲ್ ಹಾದಿ ಹಿಡಿಯುತ್ತೀರೋ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಜಾರಿ ಮಾಡಿದ ಪ್ಯಾಸಿಕ್ಯೂಷನ್ ಅನುಮತಿ ಬಗ್ಗೆ ಪ್ರತಿಕ್ರಿಯಿಸಿದರು. ಅಕ್ರಮವಾಗಿ ಮುಡಾದಿಂದ ಪತ್ನಿ ಹೆಸರಲ್ಲಿ ಪಡೆದಿರುವ 14 ಸೈಟುಗಳು ವಿರುದ್ಧ ತನಿಖೆಯಾಗಬೇಕೆಂದು ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ನಾನು ರಾಜ್ಯಪಾಲರ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರತಾಪ್ ಸಿಂಹ ಅವರು, ಸಿದ್ದರಾಮಯ್ಯ ಸರ್, ಅಡ್ವಾಣಿ, ಯಡಿಯೂರಪ್ಪ ಸಾಹೇಬರನ್ನು ಅನುಕರಣೆ ಮಾಡಿ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುತ್ತಿರೋ ಅಥವಾ ಅರವಿಂದ ಕೇಜ್ರಿವಾಲ್ ಹಾದಿ ಹಿಡಿಯುತ್ತೀರೋ? ಹಾಗೂ ಹೊಂದಾಣಿಕೆ ರಾಜಕಾರಣ ಕೊನೆಯಾಗಲು ಈ ಘಟನೆ ಒಂದು ಮೇಲ್ಪಂಕ್ತಿಯಾದೀತೇ?
ಸಿದ್ದರಾಮಯ್ಯ ಅವರಿಗೆ ತಿಂಗಳ ಹಿಂದೆಯೇ ನಾನು ಸ್ಪಷ್ಟವಾಗಿ ಹೇಳಿದ್ದೆ ಸೈಟ್‌ಗಳನ್ನು ಸರೆಂಡರ್ ಮಾಡಿ, ತನಿಖೆಗೆ ಆದೇಶಿಸಿ, ಒಬ್ಬರು ಸಿಟ್ಟಿಂಗ್ ಜಡ್ಜ್ ಅಥವಾ ಸಂತೋಷ್ ಹೆಗ್ಡೆ , ಎನ್ ಕುಮಾರ್ ಅವರಂತಹ ಕ್ಯಾಲಿಬರ್ ಇರುವ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ , ಎಲ್ಲಾ ಕಳ್ಳರು ಸಿಕ್ಕಿ ಹಾಕಿಕೊಳ್ತಾರೆ ಎಂದು ಹೇಳಿದ್ದೆ ಎಂದು ಹೇಳಿದ್ದರು.<>