ಏಳು ದಿನಗಳಲ್ಲಿ ಮೀಸಲಾತಿ ಪಟ್ಟಿ ಪ್ರಕಟಿಸಬೇಕು, ಬಜೆಟ್ ಚುನಾವಣೆ ಪ್ರಕ್ರಿಯೆ ಆರಂಭವಾಗಬೇಕು ಅಂತಾ ತೀರ್ಪು ನೀಡಿದೆ. ಆದ್ರೂ ಇದನ್ನು ಮುಂದೂಡುವ ಪ್ರಯತ್ನ ನಡೆಸುತ್ತಿದೆ ಎಂದು ಸರ್ಕಾರ ವಿರುದ್ಧ ಕಾಂಗ್ರೆಸ್ ಮಾಜಿ ಮೇಯರ್ ಎಂ. ಶಿವರಾಜು ಆರೊಪಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸ್ಥಳೀಯ ಆಡಳಿತವನ್ನು ಕಾಪಾಡುವ ಸರ್ಕಾರ ಮಾಡುತ್ತಿಲ್ಲ. ಬೆಂಗಳೂರಿನ ಜನರ ಕಷ್ಟ ಕೇಳುವವರೇ ಇಲ್ಲ, ಒಂಟಿ ಮನೆ ಯೋಜನೆಗಳ ಪ್ರತೀವರ್ಷ ಜಾರಿಯಾಗುತ್ತಿರುವ ಕಾಮಗಾರಿಗಳಿಗೆ ಬಿಲ್ ಕೊಟ್ಟಿಲ್ಲ. ರಸ್ತೆ-ಗುಂಡಿಗಳ ಸಮಸ್ಯೆ, ತ್ಯಾಜ್ಯ ವಿಲೇವಾರಿ, ಸಮಸ್ಯೆಗಳು ಸೋಲುವ ಭಯದಿಂದ ಚುನಾವಣೆ ನಡೆಯುತ್ತಿದೆ. 2006-10 ರಲ್ಲೂ ಬಿಬಿಎಂಪಿ ಚುನಾವಣೆ ಮಾಡಲಿಲ್ಲ, ಬಿಜೆಪಿ ಸರ್ಕಾರ ಪಾಲಿಕೆ ಎಲೆಕ್ಷನ್ ಮಾಡಲಿಲ್ಲ . ಆದ್ದರಿಂದ ಏನು ಕಾರಣ ಹೇಳದೆ ಚುನಾವಣೆ ನಡೆಸಬೇಕು. ಇಲ್ಲದಿದ್ರೆ ಕಾಂಗ್ರೆಸ್ ನಿಂದ ಸರ್ಕಾರದ ವಿರುದ್ಧ ಕಂಟೆಂಪ್ಟ್ ಆಫ್ ಕೋರ್ಟ್ ದಾಖಲಿಸಲು ನಿರ್ಧಾರ ಮಾಡುತ್ತೆವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.