Select Your Language

Notifications

webdunia
webdunia
webdunia
Friday, 11 April 2025
webdunia

ಆರ್ಥಿಕವಾಗಿ ಕುಗ್ಗಿರುವ ಬಿಬಿಎಂಪಿಗೆ ಹೊರೆ ಆಗ್ತಿದ್ದಾರೆ ಮಾರ್ಷಲ್ ಗಳು..!

Reservation list should be published in 6 days
bangalore , ಸೋಮವಾರ, 1 ಆಗಸ್ಟ್ 2022 (14:08 IST)
ಮಾರ್ಷಲ್ ಫೈನ್ ಹಾಕಿ ಪಾಲಿಕೆ ಹೆಚ್ಚಿಸಿ ಅಂದ್ರೆ ಇದೀಗ ಇವರ ನಿರ್ವಹಣಾ ವೆಚ್ಚವೇಮಾರ್ಷಲ್ ಗಳು ಕೋಟಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ.
 
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ, ಮಾಸ್ಕ್ ಅಂತ ಜನರ ಜೇಬಿಗೆ ಕೈ ಹಾಕುತ್ತಿದ್ದ ಮಾರ್ಷಲ್ ಗಳೀಗ ಪಾಲಿಕೆಗೇ ಹೊರೆಯಾಗಿದ್ದು,ಸದ್ಯ ಮಾರ್ಷಲ್ ಗಳಿಂದ ಬಿಬಿಎಂಪಿಗೆ ಪ್ರತಿ ತಿಂಗಳು ಸರಾಸರಿ 7 ಲಕ್ಷ ರೂಪಾಯಿ ಆದಾಯ ಬರುತ್ತಿದೆ.ಆದರೆ ಪ್ರತಿ ತಿಂಗಳಿಗೆ ಮಾರ್ಷಲ್ ಗಳ ನಿರ್ವಹಣಾ ವೆಚ್ಚವೇ ಒಂದು ಕೋಟಿ ರೂಪಾಯಿ.ಪ್ರತಿ ತಿಂಗಳು ತನ್ನ ಜೇಬಿಂದಲೇ ಸುಮಾರು 90 ಲಕ್ಷ ರೂ. ಬಿಬಿಎಂಪಿ ಖರ್ಚು ಮಾಡುತ್ತಿದೆ.ಸದ್ಯ ಬಿಬಿಎಂಪಿಯಲ್ಲಿ 437 ಮಾರ್ಷಲ್ ಗಳಿಂದ ಫೀಲ್ಡ್ ನಲ್ಲಿ ಫೈನ್ ಕಲೆಕ್ಟ್ ಕೆಲಸ ಆಗ್ತಿದೆ
 
ಪ್ರತಿ ತಿಂಗಳು ಸುಮಾರು 25 ಸಾವಿರ ರೂಪಾಯಿ ಒಬ್ಬೊಬ್ಬ ಮಾರ್ಷಲ್ ಗೆ ಸಂಬಳವನ್ನ ಪಾಲಿಕೆ ಕೊಡುತ್ತಿದೆ.ಹೀಗಾಗಿ ಇವರಿಂದ ಬರುವ ಆದಾಯಕ್ಕಿಂತ ಹೆಚ್ಚುವರಿಯಾಗಿ 90 ಲಕ್ಷ ಖರ್ಚು ಬಿಬಿಎಂಪಿ ಮಾಡುತ್ತಿದೆ.ಮಾರ್ಷಲ್ ಗಳ ಸ್ಕ್ವಾಡ್ ವಾಹನದ ಖರ್ಚೂ ಕೂಡ ಪಾಲಿಕೆ ಪಾಲಿಗೆ ಹೊರೆಯಾಗಿದೆ.2018ರಲ್ಲಿ ಜನರಿಗೆ ಎಚ್ಚರಿಕೆ ಹಾಗೂ ಫೈನ್ ಕಲೆಕ್ಟ್ ಕೆಲಸಕ್ಕೆ ಮಾರ್ಷಲ್ಸ್ ಗಳನ್ನ ಬಿಬಿಎಂಪಿ ನೇಮಿಸಿತ್ತು.ನೇಮಕಗೊಂಡ ಮರುವರ್ಷವೇ ಕೊರೋನಾ ದಾಳಿಯಾಗಿದೆ. ಆಗ ಮಾಸ್ಕ್ ಹಾಗೂ ಜನ ನಿಯಂತ್ರಣಕ್ಕೆ ಬಳಿಕೆ ಮಾಡಿಕೊಳ್ಳಲಾಗಿತ್ತು.
 
ಆದರೀಗ ಕೊರೊನಾ ಕಡಿಮೆಯಾಗಿದೆ, ಮಾಸ್ಕ್ ಗೂ ಫೈನಿಲ್ಲ .ಬಹುಪಾಲು ಮಾರ್ಷಲ್ ಗಳ ಅಗತ್ಯ ಪಾಲಿಕೆಗೆ ಸದ್ಯಕ್ಕಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಗಾತಿ ಅನುಮತಿಯಿಲ್ಲದೇ ಕಾಂಡೋಮ್ ತೆಗೆಯುವುದು ಅಪರಾಧ : ಸುಪ್ರೀಂ ಕೋರ್ಟ್