Select Your Language

Notifications

webdunia
webdunia
webdunia
webdunia

ಖಾಸಗಿ ಕ್ಷೇತ್ರದಲ್ಲೂ ಇನ್ಮುಂದೆ ಕನ್ನಡಿಗರಿಗೆ ಫುಲ್ ಮೀಸಲಾತಿ

Santhosh Lad

Krishnaveni K

ಬೆಂಗಳೂರು , ಶನಿವಾರ, 15 ಜೂನ್ 2024 (09:59 IST)
Photo Credit: Facebook
ಬೆಂಗಳೂರು: ಖಾಸಗಿ ವಲಯದ ಸಿ ಮತ್ತು ಡಿ ವೃಂದದ ಉದ್ಯೋಗದಲ್ಲಿ ಇನ್ನು ಮುಂದೆ ಕನ್ನಡಿಗರಿಗೆ ಸಂಪೂರ್ಣ ಮೀಸಲಾತಿ ಒದಗಿಸಲು ಕಾರ್ಮಿಕ ಇಲಾಖೆ ಮುಂದಾಗಿದೆ.

ಕನ್ನಡಿಗರಿಗೆ ಶೇ.100 ರಷ್ಟು ಮೀಸಲಾತಿ ಮತ್ತು ವಿಕಲಾಂಗರಿಗೆ ಶೇ. 5 ರಷ್ಟು ಮೀಸಲಾತಿ ನೀಡಲು ಕಾರ್ಮಿಕ ಇಲಾಖೆ ಮುಮದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕೈಗಾರಿಕಾ ಉದ್ಯೋಗ ನಿಯಮ-2024 ರನ್ನು ರೂಪಿಸುವ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.

ಇದು ಕನ್ನಡಿಗರ ಪಾಲಿಗೆ ಖುಷಿಯ ಸುದ್ದಿಯೇ ಸರಿ. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಇದಕ್ಕೆ ಪ್ರಯತ್ನ ನಡೆದಿತ್ತು. ಆದರೆ ಅದು ಸಫಲವಾಗಲಿಲ್ಲ. ಆದರೆ ಈ ಬಾರಿ ಸಚಿವ ಸಂತೋಷ್ ಲಾಡ್ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಡಲಿದ್ದಾರೆ. ರಾಜ್ಯದಲ್ಲಿರುವ ಕೈಗಾರಿಕೆಗಳು ಇಲ್ಲಿನ ಭೂಮಿ, ತೆರಿಗೆ, ವಿದ್ಯುತ್ ಎಂದು ಲಾಭ ಪಡೆದುಕೊಳ್ಳುತ್ತಿವೆ. ಹೀಗಾಗಿ ಇಲ್ಲಿ ಕೈಗಾರಿಕೆ ನಡೆಸುತ್ತಿರುವವರು ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವ ಉದ್ದೇಶದಿಂದ ಈ ಕಾಯಿದೆ ಜಾರಿಗೆ ತರಲು ಮುಂದಾಗಿರುವುದಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೂರು ಕೊಟ್ಟ ಮಾತ್ರಕ್ಕೆ ಬಂಧನ ಸರಿಯಲ್ಲ: ಯಡಿಯೂರಪ್ಪ ಪರ ಶಾಮನೂರು ಬ್ಯಾಟಿಂಗ್