Select Your Language

Notifications

webdunia
webdunia
webdunia
webdunia

ದೂರು ಕೊಟ್ಟ ಮಾತ್ರಕ್ಕೆ ಬಂಧನ ಸರಿಯಲ್ಲ: ಯಡಿಯೂರಪ್ಪ ಪರ ಶಾಮನೂರು ಬ್ಯಾಟಿಂಗ್

Shamanur Shivshankarappa

Sampriya

ದಾವಣಗೆರೆ , ಶುಕ್ರವಾರ, 14 ಜೂನ್ 2024 (19:33 IST)
Photo Courtesy X
ದಾವಣಗೆರೆ: ಯಾವುದೇ ಆರೋಪ ಸಾಬೀತಾದ ಮೇಲೆ ಬಂಧನ ಮಾಡುವುದು ಸರಿ. ಯಾರೋ ಹೆಣ್ಣು ಮಗಳು ದೂರು ಕೊಟ್ಟ ಮಾತ್ರಕ್ಕೆ ಬಂಧನಕ್ಕೆ ಮುಂದಾಗುವುದು ಎಷ್ಟು ಸರಿ. ಅದಕ್ಕೆ ಅರ್ಥ ಇದೆಯೇ ಎಂದು ಕಾಂಗ್ರೆಸ್‌ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ರಾಜ್ಯ ಸರ್ಕಾರದ ನಡೆಯನ್ನು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧದ ಪ್ರಕರಣ ಸಂಬಂಧ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯಾರೋ ದಾರಿಯಲ್ಲಿ ಹೋಗೋರು ಕಂಪ್ಲೆಂಟ್ ಕೊಟ್ರೆ ಬಂಧನ ಎಂದರೆ ಏನರ್ಧ. ಆ ಮಹಿಳೆ 55 ಜನರ ವಿರುದ್ಧವೂ ದೂರು ನೀಡಿದ್ದಾ‌ಳೆ. ಇಂತಹದಕ್ಕೆ ಬೆಲೆ ಇದೇಯೇ ಎಂದು ಹೇಳಿದರು.

ಇದೇ ವೇಳೆ ದರ್ಶನ್‌ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ದರ್ಶನ್ ಮೇಲೆ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಹೇಳಿದರು.

ನಟ ದರ್ಶನ್ ಮಾಡಿದ್ದು ತಪ್ಪು. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಬುದ್ಧಿ ಹೇಳಿ ಕಳಿಸಬೇಕಿತ್ತು. ಅದನ್ನು ಬಿಟ್ಟು ಸಾಯುವ ಹಾಗೆ ಹೊಡೆಯಬಾರದಿತ್ತು  ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ವಯನಾಡು ಕ್ಷೇತ್ರಕ್ಕೆ ರಾಹುಲ್ ಗಾಂಧಿ ರಾಜೀನಾಮೆ: ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಸ್ಪರ್ಧೆ ಸಾಧ್ಯತೆ