Publish Date: Mon, 30 Jul 2018 (17:43 IST)
Updated Date: Mon, 30 Jul 2018 (17:47 IST)
ದಲಿತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಾಗೂ ನ್ಯಾ.ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ ತಮಟೆ ಚಳವಳಿ ನಡೆಸಲಾಯಿತು.
ದಲಿತ ಸಂಘರ್ಷ ಸಮಿತಿಯಿಂದ ತಮಟೆ ಚಳುವಳಿ ನಡೆಯಿತು. ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು. ನ್ಯಾ.ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಒತ್ತಾಯವನ್ನು ಪ್ರತಿಭಟನಾಕಾರರು ಮಾಡಿದರು. ಜಿಲ್ಲೆಯ ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಮಟೆ ಬಾರಿಸುತ್ತ ಚಳುವಳಿಗಾರರು ಒತ್ತಾಯಿಸಿದರು.
ತಮಟೆ ಬಡಿದುಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಮೂಲಕ ಬರಲಾಯಿತು. ಮಹಿಳೆಯರು ಸಹ ತಮಟೆ ಹಿಡಿದು ಚಳುವಳಿಯಲ್ಲಿ ಭಾಗಿಯಾಗಿದ್ದರು.