ಬೆಂಗಳೂರು: ನಟ ದರ್ಶನ್ ಆಂಡ್ ಗ್ಯಾಂಗ್ ನಿಂದ ಹಲ್ಲೆಗೊಳಗಾಗಿ ಹತ್ಯೆಗೀಡಾಗಿದ್ದಾರೆ ಎನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಮದುವೆ ಫೋಟೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಗರಿಗೆ ಆಹಾರವಾಗಿದೆ.
ರೇಣುಕಾಸ್ವಾಮಿ ಮತ್ತು ಪತ್ನಿ ಸಹನಾ ಮದುವೆಯಾಗಿ ನಿನ್ನೆಗೆ ಒಂದು ವರ್ಷ. ಈ ಹಿನ್ನಲೆಯಲ್ಲಿ ಅವರ ಮದುವೆ ವಿಡಿಯೋಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದನ್ನು ಗಮನಿಸಿದ ಟ್ರೋಲಿಗರು ಈ ಪೈಕಿ ರಿಸೆಪ್ಷನ್ ನಲ್ಲಿ ರೇಣುಕಾಸ್ವಾಮಿಯ ಫೋಟೋವೊಂದನ್ನು ಇಟ್ಟುಕೊಂಡು ಟ್ರೋಲ್ ಮಾಡುತ್ತಿದ್ದಾರೆ.
ಈ ಫೋಟೋದಲ್ಲಿ ರೇಣುಕಾಸ್ವಾಮಿ ಪಕ್ಕದಲ್ಲಿ ಹೆಂಡತಿ ಇದ್ದರೂ ತಮ್ಮ ಹಿಂದೆ ಕಲಶ ಕನ್ನಡಿ ಹಿಡಿದುಕೊಂಡು ನಿಂತಿರುವ ಹುಡುಗಿಯನ್ನೇ ದಿಟ್ಟಿಸಿ ನೋಡುತ್ತಿದ್ದಾರೆ. ಇದನ್ನು ನೋಡಿ ಅಣ್ಣ ತುಂಬಾ ರಸಿಕ ಎಂದು ಇಲ್ಲೇ ಗೊತ್ತಾಗುತ್ತದೆ ಎಂದು ಟ್ರೋಲ್ ಮಾಡಿದ್ದಾರೆ.
ನೀಲಿ ಬಣ್ಣದ ಸೂಟ್ ಹಾಕಿಕೊಂಡಿರುವ ರೇಣುಕಾಸ್ವಾಮಿಯ ಫೋಟೋ ನೋಡಿ ನೆಟ್ಟಿಗರು ನೋಡುವಾಗ ಎಷ್ಟು ಅಮಾಯಕನಂತೆ ಕಾಣುತ್ತಾನೆ. ಇವನಿಗೆ ಯಾಕೆ ಬೇಕಿತ್ತು ಅಶ್ಲೀಲ ಸಂದೇಶ ಕಳುಹಿಸುವ ಕೆಲಸ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ಮದುವೆ ಫೋಟೋ ನೋಡಿ ಅನುಕಂಪ ವ್ಯಕ್ತಪಡಿಸಿದ್ದಾರೆ.