Select Your Language

Notifications

webdunia
webdunia
webdunia
webdunia

ಸ್ವಾಮೀಜಿ ನೆನೆದು ಭಕ್ತರ ಕಣ್ಣೀರು, ಆಶ್ರಮದಲ್ಲಿ ನೀರವ ಮೌನ

ಹತ್ಯೆ ಪ್ರಕರಣ
ಚಿಕ್ಕೋಡಿ , ಶನಿವಾರ, 8 ಜುಲೈ 2023 (13:24 IST)
ಚಿಕ್ಕೋಡಿ : ಹೀರೆಕುಡಿ ನಂದಿ ಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನಮುನಿ ಬರ್ಬರವಾಗಿ ಹತ್ಯೆಯಾಗಿದ್ದು, ಸುದ್ದಿ ತಿಳಿದ ಭಕ್ತರು ಸ್ವಾಮೀಜಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.
 
ಸ್ವಾಮಿಜಿ ಹತ್ಯೆಯಿಂದ ನಿತ್ಯ ಭಕ್ತರಿಂದ ತುಂಬಿ ತುಳುಕುತ್ತಿದ್ದ ಆಶ್ರಮದಲ್ಲಿ ಇಂದು (ಶನಿವಾರ) ನೀರವ ಮೌನ ಆವರಿಸಿದೆ. ಜುಲೈ 6ರಂದು ಹೀರೆಕುಡಿಯ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ನಂದಿ ಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದರು.

ನಾಪತ್ತೆಯಾದ ಹಿನ್ನೆಲೆ ಭಕ್ತರು ಆಶ್ರಮದ ಸುತ್ತಮುತ್ತ ಸ್ವಾಮೀಜಿಗಾಗಿ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗದ ಹಿನ್ನೆಲೆ ಚಿಕ್ಕೋಡಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಅನುಮಾನದ ಮೇಲೆ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ; ಯಾವ ಇಲಾಖೆಗೆ ಎಷ್ಟು ಕೋಟಿ ಅನುದಾನ ಸಿಕ್ಕಿದೆ?