ಸಾಂಸ್ಕ್ರತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದ ಏಕ ಶಿಲಾ ನಂದಿ ವಿಗ್ರಹಕ್ಕೆ ಧಾರ್ಮಿಕ ವಿಧಿ ವಿಧಾನಗಳಂತೆ ಅಭಿಷೇಕ ನೆರವೇರಿಸಲಾಯಿತು. ಲೋಕ ಕಲ್ಯಾಣಕ್ಕಾಗಿ ಕಾರ್ತಿಕ ಮಾಸದಲ್ಲಿ ಬೆಟ್ಟದ ಬಳಗದವರು ನೆರವೇರಿಸುವ ನಂದಿ ಮಜ್ಜನ ವೀಕ್ಷಣೆಗೆ ಭಕ್ತ ಸಾಗರವೇ ನೆರದಿತ್ತು. ನಂದಿ ವಿಗ್ರಹದ
ರಕ್ಷಣೆಯ ದೃಷ್ಠಿಯಿಂದ ಕಳೆದ ಹಲವು ವರ್ಷಗಳಿಂದ ಭಕ್ತರೆ ನಂದಿಗೆ ಅಭಿಷೇಕ ನೆರವೇರಿಸುತ್ತಿದ್ದಾರೆ.. ಗಂಗೆ, ಕ್ಷೀರ, ತುಪ್ಪ, ಮೊಸರು, ಕಬ್ಬಿನ ರಸ, ಜೇನು, ವಿಭೂತಿ, ಹರಿಶಿನ, ಗಂಧ, ಚಂದನ, ಕಷಾಯ ಸೇರಿದಂತೆ 30 ರೀತಿಯ ವಿವಿಧ ಪದಾರ್ಥಗಳಿಂದ ನಂದಿಗೆ ಅಭಿಷೇಕ ನೆರವೇರಿಸಲಾಯಿತು. ಒಂದೊಂದು ದ್ರವ್ಯಗಳಿಂದ ಅಭಿಷೇಕ ನೆರವೇರಿಸುವಾಗ ನಂದಿ ಅತ್ಯಾಕರ್ಷಕವಾಗಿ ಕಂಗೊಳಿಸಿದ.. 4 ಪಾಯಿಂಟ್ 8 ಮೀಟರ್ ಎತ್ತರದ ಏಕ ಶಿಲೆಯ ನಂದಿ ವಿಗ್ರಹಕ್ಕೆ ಸುವರ್ಣ ನಾಣ್ಯ ಸೇರಿದಂತೆ ವಿವಿಧ ಪದಾರ್ಥಗಳಿಂದ ಅಭಿಷೇಕ ಮಾಡಲಾಯಿತು.ನಂದಿ ದರ್ಶನ ಪಡೆದು ಭಕ್ತರು ಪುನೀತರಾದ್ರು