Publish Date: Thu, 18 Jul 2019 (16:05 IST)
Updated Date: Thu, 18 Jul 2019 (16:07 IST)
ಪ್ರಿಯತಮೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕ ಪತಿರಾಯನೊಬ್ಬ ತನ್ನ ಪತ್ನಿಗೆ ಮಾಡಬಾರದ್ದನ್ನು ಮಾಡಿ ಪರಾರಿಯಾಗಿದ್ದಾನೆ.
ತನ್ನ ಪತಿ ಬೇರೆ ಯುವತಿಯೊಂದಿಗೆ ಕಾರಿನಲ್ಲಿ ಹೋಗ್ತಿರೋದನ್ನು ಪತ್ನಿ ನೋಡಿದ್ದಾಳೆ. ಆಟೋದಲ್ಲಿ ಹಿಂಬಾಲಿಸಿ ಕಾರು ನಿಲ್ಲಿಸಿದ್ದಾಳೆ. ಆಗ ಯುವತಿಯೊಂದಿಗೆ ತನ್ನ ಗಂಡ ಇರೋದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಳು. ಆದರೆ ಕಾರನ್ನು ಬಿಟ್ಟು ಇಳಿದು ಬರದ ತನ್ನ ಪತ್ನಿಗೆ ಕಾರು ಗುದ್ದಿ ಪರಾರಿಯಾಗಿದ್ದಾನೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದೆ.
ಪತಿ, ಲವರ್ ಜೊತೆ ಪರಾರಿಯಾಗಿದ್ದಾನೆ. ಗಾಯಗೊಂಡಿರೋ ಪತ್ನಿ ಆಸ್ಪತ್ರೆ ಸೇರಿದ್ದು ಪತಿ ಹಾಗೂ ಆತನ ಪ್ರೇಯಸಿ ವಿರುದ್ಧ ದೂರು ದಾಖಲು ಮಾಡಿದ್ದಾಳೆ.