Publish Date: Mon, 28 Sep 2020 (23:36 IST)
Updated Date: Mon, 28 Sep 2020 (23:37 IST)
ರಾಜ್ಯ ಸರಕಾರದ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ಗೊಂದಲಕ್ಕೆ ಸಧ್ಯದಲ್ಲೇ ತೆರೆ ಬೀಳಲಿದೆ.
ಬಿಜೆಪಿ ಹೈಕಮಾಂಡ್ ಈ ಕುರಿತು ಸ್ಪಷ್ಟವಾಗಿ ನಿರ್ಧಾರ ಕೈಗೊಂಡಿದ್ದು, ಅಧಿಕೃತ ಪ್ರಕಟಣೆಯನ್ನು ರಾಜ್ಯದ ಮುಖಂಡರು ಇನ್ನಷ್ಟೇ ಮಾಡಲಿದ್ದಾರೆ.
ದೆಹಲಿಗೆ ತೆರಳಲು ಮುಂದಾಗಿರುವ ಸಿಎಂ ಬಿ.ಎಸ್.ಯಡಿಯೂರಪ್ಪನವರು, ಹೈಕಮಾಂಡ್ ಅನುಮತಿಗಾಗಿ ಕಾಯುತ್ತಿದ್ದಾರೆ.
ದೆಹಲಿಯಿಂದ ಸಿಎಂ ಬಂದ ಕೂಡಲೇ ಯಾವುದೇ ಕ್ಷಣದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ಘೋಷಣೆ ಮಾಡೋದರಲ್ಲಿ ಸಂದೇಹವಿಲ್ಲ.
ಬೇರೆ ಪಕ್ಷಗಳಿಂದ ಬಿಜೆಪಿ ಬಂದಿರುವ ಇಬ್ಬರು ವಲಸಿಗರು ಹಾಗೂ ಉಳಿದವರಲ್ಲಿ 6 ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ಸಿಗೋದಾಗಿ ಪಕ್ಷದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.