Select Your Language

Notifications

webdunia
webdunia
webdunia
webdunia

ಬರಗೂರು ಒಪ್ಪಿದರೆ ಮುಖಾಮುಖಿ ಚರ್ಚೆಗೆ ಸಿದ್ಧ : ನಾಗೇಶ್

ಬರಗೂರು ಒಪ್ಪಿದರೆ ಮುಖಾಮುಖಿ ಚರ್ಚೆಗೆ ಸಿದ್ಧ : ನಾಗೇಶ್
ಬೆಂಗಳೂರು , ಬುಧವಾರ, 25 ಮೇ 2022 (11:02 IST)
ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಮಾಡಿದ,

ಹಲವು ಬದಲಾವಣೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಈ ಸಂಬಂಧ ಡಾ.ಬರಗೂರು ರಾಮಚಂದ್ರಪ್ಪ ಅವರು ಇಚ್ಛಿಸಿದರೆ ಮುಖಾಮುಖಿ ಚರ್ಚೆಗೆ ಸಿದ್ಧ ಎಂದು ಹೇಳಿದ್ದಾರೆ.

ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಸಮಿತಿ ಮಾಡಿರುವ ಪಠ್ಯಪರಿಷ್ಕರಣೆ ಬಗ್ಗೆ ಪ್ರಶ್ನಿಸಿ ವಿವಾದ ಸೃಷ್ಟಿಸುತ್ತಿರುವವರು, ಬರಗೂರು ರಾಮಚಂದ್ರಪ್ಪ ಅವರ ಸಮಿತಿ ಕುವೆಂಪು, ಗಾಂಧಿ, ಅಂಬೇಡ್ಕರ್ ಅವರ ಪಠ್ಯಗಳನ್ನು ತೆಗೆದುಹಾಕಿದರೂ ಏಕೆ ಪ್ರಶ್ನಿಸಲಿಲ್ಲ? ಸಿಂಧೂ ಸಂಸ್ಕೃತಿ ಪಾಠ ತೆಗೆದು ಜವಾಹರಲಾಲ್ ನೆಹರು ಅವರು ಇಂದಿರಾಗಾಂಧಿ ಅವರಿಗೆ ಬರೆದಿರುವ ಪತ್ರವನ್ನು ಸೇರ್ಪಡೆ ಮಾಡಲಾಗಿತ್ತು.

ಅಪ್ಪ ಮಗಳಿಗೆ ಬರೆದಿರುವ ಪಾಠವನ್ನು ನಮ್ಮ ಮಕ್ಕಳು ಏಕೆ ಓದಬೇಕು? ಆ ಸಮಿತಿ ಮಾಡಿದ್ದೆಲ್ಲವೂ ಸರಿಯಾಗಿತ್ತಾ ಎಂದು ಪ್ರಶ್ನಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಖಾದ್ಯ ತೈಲ ಆಮದಿಗೆ ಆಮದು ಸುಂಕ ಇಲ್ಲ: ಸರ್ಕಾರ