Webdunia - Bharat's app for daily news and videos

Install App

ಜಯನಗರಕ್ಕೆ ರಾರಸ್ ಪ್ರವೇಶ: ಆಫ್ಬೀಟ್ ಸಸ್ಯಾಹಾರಿ ಊಟಕ್ಕೆ ಹೊಸ ಆಯಾಮ

Krishnaveni K
ಶನಿವಾರ, 31 ಜನವರಿ 2026 (15:14 IST)
ಬೆಂಗಳೂರು, ಜನವರಿ 2026: ಪ್ರೀತಿಯಿಂದ ಮತ್ತು ಸೂಕ್ಷ್ಮವಾಗಿ ರೂಪಿಸಲಾದ ‘ಆಫ್‌ಬೀಟ್’ ಸಸ್ಯಾಹಾರಿರೆಸ್ಟೋರೆಂಟ್ರಾರಸ್ (RARUS) ತನ್ನಬಹುನಿರೀಕ್ಷಿತ ಔಟ್‌ಲೆಟ್ ಅನ್ನು ಬೆಂಗಳೂರಿನ ಜಯನಗರದಲ್ಲಿ ಅಧಿಕೃತವಾಗಿ ಆರಂಭಿಸಿದೆ.

ಆಹಾರವು ಒಂದು ವಿಶ್ವವ್ಯಾಪಿ ಭಾಷೆ ಎಂಬ ನಂಬಿಕೆಯಿಂದ ಪ್ರೇರಿತವಾಗಿರುವ ರಾರಸ್, ಪ್ರೀತಿ, ನವೀನತೆ ಮತ್ತು ಅಚಲಗುಣಮಟ್ಟವನ್ನುಒಂದಾಗಿ ಬೆರೆಸಿದ ನಿಜಕ್ಕೂ ಅಪರೂಪದ ಪಾಕ ಅನುಭವವನ್ನು ಊಟ ಪ್ರಿಯರಿಗೆ ನೀಡಲು ಮುಂದಾಗಿದೆ.

ಲ್ಯಾಟಿನ್ಭಾಷೆಯಲ್ಲಿ “ಅಪರೂಪ” ಎಂಬ ಅರ್ಥಹೊಂದಿರುವ RARUS ಎಂಬಹೆಸರು, ಇತರರಿಂದ ವಿಭಿನ್ನವಾಗಿರುವ, ನೆನಪಿನಲ್ಲಿ ಉಳಿಯುವ ವಿಶಿಷ್ಟ ಊಟದ ಅನುಭವಗಳನ್ನು ನೀಡುವುದು ಎಂಬ ಸಂಸ್ಥೆಯ ಮೂಲತತ್ವವನ್ನು ಪ್ರತಿಬಿಂಬಿಸುತ್ತದೆ.

ರಾರಸ್ಒಂದು 100% ಸಸ್ಯಾಹಾರಿ ರೆಸ್ಟೋರೆಂಟ್ ಆಗಿದ್ದು, ಇದರ ಮೆನುಗಳಲ್ಲಿ ಸುಮಾರು 70% ಪದಾರ್ಥಗಳು ನಗರದಲ್ಲಿ ಸಾಮಾನ್ಯವಾಗಿ ದೊರೆಯದ ವಿಶಿಷ್ಟ ಸೃಷ್ಟಿಗಳಾಗಿವೆ. ಇವು ಅತಿಥಿಗಳಿಗೆ ಹೊಸರುಚಿಗಳು ಮತ್ತು ಸೃಜನಾತ್ಮಕ ಪ್ರಸ್ತುತಿಗಳನ್ನು ಅನ್ವೇಷಿಸುವ ಅವಕಾಶ ನೀಡುತ್ತವೆ. ಉಳಿದ 30% ಮೆನು ಭಾಗವು ಸಾಂಪ್ರದಾಯಿಕ ಸಸ್ಯಾಹಾರಿ ಪ್ರಿಯಪದಾರ್ಥಗಳಿಗೆ ಗೌರವಸಲ್ಲಿಸಿ, ಊಟಕ್ಕೆ ಆರಾಮ ಮತ್ತು ಪರಿಚಿತಭಾವವನ್ನುನೀಡುತ್ತದೆ. ಮುಖ್ಯವಾಗಿ, ಆಹಾರ ವಿಜ್ಞಾನದಲ್ಲಿ ತನ್ನ ನವೀನತೆಯನ್ನು ತೋರಿಸುವಂತೆ ರಾರಸ್ ಪ್ರತೀ ಆರು ತಿಂಗಳಿಗೊಮ್ಮೆ ತನ್ನ ಮೆನುಗಳನ್ನು ಪರಿಷ್ಕರಿಸುತ್ತದೆ.

ಯಾವುದೇ ಒಂದು ಪಾಕ ಶೈಲಿಗೆ ಸೀಮಿತವಾಗದೆ, ರಾರಸ್ ಜಗತ್ತಿನ ವಿವಿಧ ಪಾಕಪರಂಪರೆಗಳಿಂದ ಪ್ರೇರಣೆಯನ್ನುಪಡೆದುಕೊಳ್ಳುತ್ತದೆ. ಅದೇಸಮಯದಲ್ಲಿ, ಸ್ಥಳೀಯರು ರುಚಿ ಸಂವೇದನೆಗೆ ಗಟ್ಟಿಯಾಗಿ ಬದ್ಧವಾಗಿರುತ್ತದೆ. ಪ್ರತಿಯೊಂದು ಪದಾರ್ಥವೂ ನವೀನತೆ ಮತ್ತು ಪ್ರಾಮಾಣಿಕತೆಯ ಸಮತೋಲನವನ್ನು ಸಾಧಿಸುವಂತೆ ಸೂಕ್ಷ್ಮವಾಗಿ ರೂಪಿಸಲ್ಪಟ್ಟಿದ್ದು, ಸಾಹಸಿಕ ಆಹಾರ ಪ್ರಿಯರಿಗೂ ಸಾಂಪ್ರದಾಯಿಕ ಸಸ್ಯಾಹಾರಿ ಊಟವನ್ನುಇಷ್ಟಪಡುವವರಿಗೂ ಸಮಾನವಾಗಿ ಆಕರ್ಷಕವಾಗಿದೆ.
ರಾರಸ್‌ನಲ್ಲಿಆಹಾರವೇ ಕೇಂದ್ರಬಿಂದು. ಇದಕ್ಕೆಬೆಂಬಲವಾಗಿ ಸರಳ ಮತ್ತು ವಿನಮ್ರಸೇವೆ, ಆಲೋಚನಾತ್ಮಕವಾಗಿ ವಿನ್ಯಾಸಗೊಳಿಸಿದ ವಾತಾವರಣ ಹಾಗೂ ಮನಸ್ಸಿಗೆ ಶಾಂತಿಯನ್ನು ನೀಡುವ ಆಯ್ದ ಸಂಗೀತವಿದೆ. ಪ್ರತಿಯೊಂದು ಅಂಶವೂ ಅತಿಥಿಗಳಿಗೆ ಆಳವಾದ, ಆಫ್‌ಬೀಟ್ ಅನುಭವವನ್ನುನೀಡುವಂತೆ ಜಾಣ್ಮೆಯಿಂದ ಜೋಡಿಸಲಾಗಿದೆ, ಅವರು ತೃಪ್ತಿಯಿಂದ ಮಾತ್ರವಲ್ಲ, ನಗುನಗುತ್ತ ಹೊರಡುವಂತೆ ಮಾಡಲು.

ರಾರಸ್‌ನ ಸಹ-ಸ್ಥಾಪಕರಾದ ಶ್ರೀವಿಜಯ್ಮಾನೆ ಅವರ ಪ್ರಕಾರ,
“ಉತ್ತಮ ಆಹಾರವು ಸಂತೋಷವನ್ನುಸೃಷ್ಟಿಸುತ್ತದೆ ಎಂಬುದು ನಮ್ಮ ನಂಬಿಕೆ. ಹುಬ್ಬಳ್ಳಿಯಲ್ಲಿ ನಮ್ಮ ಮೊದಲ ಔಟ್‌ಲೆಟ್ ಆರಂಭಿಸಿದ ಬಳಿಕ, ಅಲ್ಲಿಗೆ ಭೇಟಿ ನೀಡಿದ ಬೆಂಗಳೂರು ಪ್ರವಾಸಿಗರ ಅಪಾರಬೇಡಿಕೆಯಿಂದಾಗಿ ಬೆಂಗಳೂರಿನಲ್ಲಿ ರೆಸ್ಟೋರೆಂಟ್ ತೆರೆಯಲು ನಿರ್ಧರಿಸಿದೆವು. ಬೆಂಗಳೂರು ಮಾತ್ರವಲ್ಲದೆ, ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್, ಪುಣೆ, ಕೊಲ್ಹಾಪುರ, ಬೆಳಗಾವಿ ಮುಂತಾದ ನಗರಗಳಿಂದಲೂ ನಮಗೆ ವಿನಂತಿಗಳು ಬಂದಿವೆ. ಗ್ರಾಹಕರಿಂದ ದೊರೆತ ಭಾರೀ ಪ್ರತಿಕ್ರಿಯೆ, ಧನಾತ್ಮಕ ಪ್ರತಿಸ್ಪಂದನೆ ಮತ್ತು ಹೃದಯಸ್ಪರ್ಶಿ ಅಭಿಪ್ರಾಯಗಳು ನಮ್ಮ ಬ್ರಾಂಡ್ದೃಷ್ಟಿಕೋನದ ಮೇಲಿನ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿವೆ. ನಾವು ಹಾಜರಿರುವ ಪ್ರತಿಯೊಂದು ನಗರದಲ್ಲೂಆಫ್‌ಬೀಟ್ ಅನುಭವಗಳನ್ನುನೀಡುವ ಅತ್ಯಂತ ಮೆಚ್ಚಿನ ರೆಸ್ಟೋರೆಂಟ್ ಆಗಲು ಬಯಸುತ್ತೇವೆ.”

ರಾರಸ್, ನವದೆಹಲಿಯಲ್ಲಿನಡೆದ ರೆಸ್ಟೋರೆಂಟ್ಆಫ್ ದಿ ಇಯರ್ ಅವಾರ್ಡ್ಸ್ 2024ನಲ್ಲಿಬೆಸ್ಟ್ಗ್ಲೋಬಲ್ಕುಝಿನ್ರೆಸ್ಟೋರೆಂಟ್ ಪ್ರಶಸ್ತಿಯನ್ನುಪಡೆದಿದೆ. ಅಪರೂಪದ ಮತ್ತು ವಿಭಿನ್ನ ಸಸ್ಯಾಹಾರಿ ಊಟದ ಅನುಭವವನ್ನು ನೀಡುವ ಉತ್ಸಾಹದಿಂದಲೇ ರಾರಸ್ ಮುನ್ನಡೆಯುತ್ತಿದೆ.

ಬುಕಿಂಗ್ಗಾಗಿ: +91 9606974165
ವಿಳಾಸ: 63/2, 1ನೇಮಹಡಿ (ಜಾವಾಸಿಟಿಮೇಲೆ), 8ನೇಮೇನ್, 18ನೇಕ್ರಾಸ್ರಸ್ತೆ, ಜಯನಗರ 3ನೇಬ್ಲಾಕ್, ಬೆಂಗಳೂರು – 560011
ಇನ್ಸ್ಟಾಗ್ರಾಂ:https://www.instagram.com/rarusbengaluru/
ಸ್ಥಳ:https://share.google/pQ2xUUyKUScbgdZXD

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕ ಕ್ಯಾಬಿನೆಟ್ ವಿಸ್ತರಣೆ: ಸಚಿವರ ಲಿಸ್ಟ್ ಇನ್ನೂ ಕೊಡದ ಹೈಕಮಾಂಡ್

ಕೆಆರ್ ಎಸ್ ಡ್ಯಾಮ್ 100 ಅಡಿ ಹೆಚ್ಚಳ: ಇದರಿಂದ ಕಾವೇರಿ ನೀರಿನ ಸಮಸ್ಯೆ ಬಗೆಹರಿಯುತ್ತಾ

ಎಲ್ಲೆಲ್ಲೂ ಮಳೆ ಬರ್ತಿದೆ, ಬೆಂಗಳೂರಿನಲ್ಲಿ ಮಾತ್ರ ಯಾಕಿಲ್ಲ, ಯಾವಾಗ ಬರುತ್ತದೆ ಇಲ್ಲಿದೆ ವಿವರ

ಗರ್ಲ್ ಫ್ರೆಂಡ್ ಜೊತೆ ಸುಮ್ನೆ ಸಿನಿಮಾ ನೋಡೋದು ಬಿಟ್ಟು ಈ ಕೆಲಸ ಮಾಡಿದ್ದಕ್ಕೆ ಯುವಕನಿಗೆ ಥಿಯೇಟರ್ ನಲ್ಲಿ ಬಿತ್ತು ಗೂಸಾ Video

Karnataka Weather:ರಾಜ್ಯದಲ್ಲಿ ಈ ವಾರ ಎಲ್ಲೆಲ್ಲಿ ಮಳೆಯಾಗಲಿದೆ, ಇಲ್ಲಿದೆ ವಾರದ ಹವಾಮಾನ ವರದಿ

ಮುಂದಿನ ಸುದ್ದಿ
Show comments