ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ

Webdunia
ಬುಧವಾರ, 30 ನವೆಂಬರ್ 2022 (20:03 IST)
ಡ್ರಾಪ್ ಕೊಡುವ ಸೋಗಿನಲ್ಲಿ ಮಹಿಳೆಯನ್ನ ಬಸ್ ಗೆ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ‌ ಕರೆದೊಯ್ದು ಆತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನ ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. 
ಶಿವಕುಮಾರ್ ಬಂಧಿತ ಚಾಲಕ. ಖಾಸಗಿ ಶಾಲೆಯೊಂದರ ಸ್ಕೂಲ್ ಬಸ್ ಚಾಲಕನಾಗಿ ಇತ್ತೀಚೆಗಷ್ಟೇ ಕೆಲಸ‌ಕ್ಕೆ ಸೇರಿಕೊಂಡಿದ್ದ‌‌. ನಿನ್ನೆ ಸಂಜೆ ಎಂದಿನಂತೆ ಶಾಲಾ ಮಕ್ಕಳನ್ನು  ಡ್ರಾಪ್ ಮಾಡಿ ನಾಯಂಡಹಳ್ಳಿ ಬಳಿ ಹೋಗುತ್ತಿರುವಾಗ ಡ್ರಾಪ್ ಕೊಡುವ ಸೋಗಿನಲ್ಲಿ ಮಹಿಳೆಯನ್ನು ಬಸ್ ಗೆ ಹತ್ತಿಸಿಕೊಂಡಿದ್ದಾನೆ. ಕೆಲ ದೂರ ಹೋಗಿ ಸರ್ವೀಸ್ ರಸ್ತೆಯಲ್ಲಿ ನಿಲ್ಲಿಸಿ ಬಸ್ ನಲ್ಲೇ ಮಹಿಳೆ  ಮೇಲೆ ಆತ್ಯಾಚಾರವೆಸಗಿದ್ದಾನೆ‌‌. ಬಳಿಕ ಮಹಿಳೆಯನ್ನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ‌. ಈ ಮಧ್ಯೆ ಮಹಿಳೆಯು ಬಸ್ ಪೋಟೊ ಹಿಡಿದುಕೊಂಡು ತಮ್ಮ ಮಗನಿಗೆ ಪೋನ್ ಮಾಡಿ ತಿಳಿಸಿದ್ದಾಳೆ‌. ಮಹಿಳೆ ನೀಡಿದ ಮಾಹಿತಿ ಆಧರಿಸಿ ಬಸ್ ಚಾಲಕನನ್ನ ಪತ್ತೆ ಮಾಡಿದ  ಮಗ ಚಾಲಕನನ್ನ ಥಳಿಸಿದ್ದಾನೆ. ಈ ಸಂಬಂಧ ಚಂದ್ರಾಲೇಔಟ್ ಪೊಲೀಸರಿಗೆ ನಡೆದ ವಿಷ್ಯ ತಿಳಿಸಿದ್ದಾನೆ‌. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಜೆಪಿ ಭೀಷ್ಮ ಎಲ್‌.ಕೆ. ಅಡ್ವಾಣಿಗೆ 98ನೇ ಜನ್ಮದಿನದ ಸಂಭ್ರಮ: ಮೋದಿ ಸೇರಿ ಗಣ್ಯರ ಶುಭಾಶಯ

ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ವಿಐಪಿ ಟ್ರೀಟ್ಮೆಂಟ್: ಮಾಧ್ಯಮಗಳ ಪ್ರಶ್ನೆಗೆ ಸಿಎಂ ಏನು ಹೇಳಿದ್ರು

ಕೆಲವರು ಮುಳುಗುವುದಕ್ಕೆ ಪ್ರಾಕ್ಟೀಸ್ ಮಾಡ್ತಿದ್ದಾರೆ: ರಾಹುಲ್ ಗಾಂಧಿಗೆ ಮೋದಿ ಟಾಂಗ್

ರಾಷ್ಟ್ರಪತಿ ಜೊತೆ ವಿ ಸೋಮಣ್ಣ ಸೌತ್ ಆಫ್ರಿಕಾ ಪ್ರವಾಸ: ಮೋದಿಗೆ ಥ್ಯಾಂಕ್ಸ್ ಹೇಳಿದ ಸಚಿವ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments