Select Your Language

Notifications

webdunia
webdunia
webdunia
webdunia

ರಣರಂಗವಾಯ್ತು ಪಂಚಾಯಿತಿ ಮಾಡುತ್ತಿದ್ದ ಮನೆ

ವರದಕ್ಷಿಣೆ ಕಿರುಕುಳ
bangalore , ಭಾನುವಾರ, 5 ನವೆಂಬರ್ 2023 (21:00 IST)
ವರದಕ್ಷಿಣೆ ಕಿರುಕುಳ  ಹುಡುಗನ ಮನೆಕಡೆಯ ಕುಟುಂಬ ನೀಡ್ತಿದ್ದು,ಕಳೆದ ಎರಡು ವರ್ಷಗಳ ಹಿಂದೆ ಅದ್ಧೂರಿಯಾಗಿ ಹುಡುಗಿ ಮನೆಯವರು ಹೆಸರುಘಟ್ಟಬಳಿಯ ಫಾರ್ಮ್ ಹೌಸ್‌ನಲ್ಲಿ ಮದುವೆ ಮಾಡಿಕೊಟ್ಟಿದ್ದರು.

ಮದುವೆಯಾದ ನಂತರ ಪ್ರತಿ ದಿನ  ಪತ್ನಿಗೆ ಕ ಸೈಕೋ ಪತಿ ಕಿರುಕುಳ ನೀಡುತ್ತಿದ್ದ,ಸೈಕೋ ರೀತಿಯಲ್ಲಿ ಪತಿ ವರ್ತಿಸುತ್ತಿದ್ದ.ಐಸ್ ಕ್ರೀಂ, ಫಿಜ್ಜಾ ಕೊಡಿಸಿದ್ರು ಸಹ ಹುಡುಗಿ ಮನೆಯಲ್ಲಿ ಕರೆ ಮಾಡಿ ಹಣ ಕೊಡಿ ಅಂತಿದ್ದ.ಈತನ ಕಾಟಕ್ಕೆ ಸಾಕಷ್ಟು ಬಾರಿ ಕುಟುಂಬಸ್ಥರು ಪಂಚಾಯಿತಿ ಮಾಡ್ತಿದ್ರು.

ಹೀಗಿದ್ರು ಸಹ ಸರಿಯಾಗದೆ ಅದೇ ರಾಗ ಅದ‌ೇ ತಾಳ ಅಸಾಮಿ ಎನ್ನುವಂತಿದ್ದ.ನಿನ್ನೆಯು ಸಹ ಕುಟುಂಬದವರೆಲ್ಲಾ ಪಂಚಾಯಿತಿಗೆ ಹುಡುಗನ ಮನೆಗೆ ಬಂದಿದ್ದರು.ಪಂಚಾಯಿತಿಗೆ ಬಂದಿದ್ದಾರೆ ಎಂದು ಗೊತ್ತಿದ್ದರು ಸಹ ಮದ್ಯಪಾನ ಸೇವಿಸಿಕೊಂಡು ಆರ್ ಟಿ ನಗರದ ಗಣೇಶ ಬ್ಲಾಕ್ ಬಳಿಯಿರುವ ಮನೆಗೆ ಬಂದಿದ್ದಾನೆ.
 
ಪಂಚಾಯಿತಿ ಆಗುವಾಗ್ಲೆ ಮೊದಲಿಗೆ ಹುಡುಗನ ಮನೆಯವರಿಂದ ಹುಡುಗಿ ಮನೆಯವರಿಗೆ ಹಲ್ಲೆ ನಡೆದಿದೆ.ಹೀಗಾಗಿ ನಂತರ ಪರಸ್ಪರ ಎರಡುಕುಟುಂಬದವರು ಹೊಡೆದಾಡುಕೊಂಡಿದ್ದಾರೆ.ಕೈ ಕೈ ಮಿಲಾಯಿಸಿಕೊಂಡಿದ್ದಾರೆ.ಯುವತಿ ನೀಡಿದ ದೂರಿನ ಮೇರೆಗೆ ದೂರು ದಾಖಲಿಸಿಕೊಂಡ ಪೊಲೀಸರು ಗಲಾಟೆ ನಡೆಯುತ್ತಿದ್ದ ಯುವತಿಗೆ ಮನೆಗೆ ಬಂದು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ಬಟ್ಟೆ ಶೇಖರಿಸಿಟ್ಟಿದ್ದ ಅಪಾರ್ಟ್ಮೆಂಟ್ ಮೇಲೆ ಪೊಲೀಸರ ರೇಡ್