Select Your Language

Notifications

webdunia
webdunia
webdunia
webdunia

ನೀವು ನಂ1 ಮಿನಿಸ್ಟರ್ ಅಂತ ಸುರ್ಜೇವಾಲ ನನ್ನ ಹೊಗಳಿದ್ದಾರೆ: ಜಮೀರ್ ಅಹ್ಮದ್

Zameer Ahmed

Krishnaveni K

ಬೆಂಗಳೂರು , ಮಂಗಳವಾರ, 15 ಜುಲೈ 2025 (11:29 IST)
ಬೆಂಗಳೂರು: ರಾಜ್ಯದ ಸಚಿವರುಗಳ ಜೊತೆ ನಿನ್ನೆ ಮ್ಯಾರಥಾನ್ ಸಭೆ ನಡೆಸಿದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಇದರ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಸಚಿವ ಜಮೀರ್ ಅಹ್ಮದ್ ನನಗೆ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ, ನೀವು ನಂ1 ಮಿನಿಸ್ಟರ್ ಅಂತ ಸುರ್ಜೇವಾಲ ನನ್ನ ಹೊಗಳಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಮೊನ್ನೆಯಿಂದ ರಾಜ್ಯದಲ್ಲಿ ಬೀಡುಬಿಟ್ಟಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ರಾಜ್ಯದ ಅಸಮಾಧಾನಿತ ಕಾಂಗ್ರೆಸ್ ನಾಯಕರ ಅಹವಾಲುಗಳನ್ನು  ಕೇಳಿದ್ದರು. ಈ ವೇಳೆ ಅನೇಕ ಶಾಸಕರು ಸಚಿವರ ಮೇಲೆ ಅಸಮಾಧಾನ ಹೊರಹಾಕಿದ್ದರು.

ಹೀಗಾಗಿ ಈಗ ರಣದೀಪ್ ಸುರ್ಜೇವಾಲ ಸಚಿವರುಗಳ ಜೊತೆ ಸಭೆ ನಡೆಸಿದ್ದಾರೆ. ಶಾಸಕರ ಅಸಮಾಧಾನಗಳನ್ನು ನಿರ್ಲಕ್ಷಿಸಿದರೆ ನಿಮಗೇ ತೊಂದರೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ. ಅನುದಾನದ ಕುರಿತು ಅಸಮಾಧಾನಗಳ ಬಗ್ಗೆಯೂ ಕೇಳಿದ್ದಾರೆ.

ಇದರ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಸಚಿವ ಜಮೀರ್ ಅಹ್ಮದ್ ‘ನೀವು ನಂಬರ್ 1 ಮಿನಿಸ್ಟರ್. ಹಾಗೊಂದು ಅವಾರ್ಡ್ ಕೊಡುವುದಾದರೆ ನನಗೇ ಸಲ್ಲುಸತ್ತದೆ ಎಂದು ಸುರ್ಜೇವಾಲ ಹೊಗಳಿದ್ದಾರೆ. ಯಾವ ಶಾಸಕರೂ ನನ್ನ ಮೇಲೆ ಆರೋಪ ಮಾಡಿಲ್ಲ. ಬಿಆರ್ ಪಾಟೀಲ್ ಆರೋಪ ವಿಚಾರ ಪ್ರಸ್ತಾವನೆಯೇ ಆಗಿಲ್ಲ’ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Gold price: ದಾಖಲೆ ಬರೆದ ಬೆಳ್ಳಿ ಬೆಲೆ, ಚಿನ್ನದ ಬೆಲೆ ಎಷ್ಟಾಗಿದೆ ನೋಡಿ