Select Your Language

Notifications

webdunia
webdunia
webdunia
webdunia

ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಬೇಕು; ಆಪ್ತರ ಆಗ್ರಹ

ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಬೇಕು; ಆಪ್ತರ ಆಗ್ರಹ
ಬೆಳಗಾವಿ , ಬುಧವಾರ, 20 ಅಕ್ಟೋಬರ್ 2021 (11:26 IST)
ಬೆಳಗಾವಿ : ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಬೇಕೆಂದು ಆಪ್ತರು ಆಗ್ರಹಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೊಟ್ಟರೆ ಕ್ಷೇತ್ರದಲ್ಲಿ ಕೆಲಸಗಳಾಗುತ್ತದೆ.

ಹೀಗಾಗಿ ಅವರಿಗೆ ಸಚಿವ ಸ್ಥಾನವನ್ನು ನೀಡಿ ಅಂತ ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ವರಿಷ್ಠರಿಗೆ ಮನವಿ ಮಾಡಿದ್ದಾರೆ. ನನಗೆ ಸಚಿವ ಸ್ಥಾನ ನೀಡಿ ಎಂದು ನಾನು ಕೇಳುತ್ತಿಲ್ಲ. ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ ಅಂತ ಮಹೇಶ್ ಕುಮಟಳ್ಳಿ ಹೇಳಿಕೆ ನೀಡಿದ್ದಾರೆ.
ಜವಾಬ್ದಾರಿ ಸ್ಥಾನದಲ್ಲಿ ಮೊದಲು ಇದ್ದಂತವರು. ಪಕ್ಷವನ್ನು ಕೂಡ ಕಟ್ಟುತ್ತಿದ್ದಾರೆ. ಹಲವಾರು ರಾಜಕೀಯ ವಿದ್ಯಮಾನಗಳಲ್ಲಿ ಇದೆಲ್ಲ ನಡೆದಂತ ಘಟನೆ. ಮೊದಲಿನಿಂದಲೂ ನಾನು ಡಿಫೆಂಡ್ ಮಾಡಿಕೊಂಡು ಬಂದಿದ್ದೇನೆ, ಇವತ್ತು ಮಾಡಿಕೊಳ್ಳುತ್ತೇನೆ. ರಮೇಶ್ ಜಾರಕಿಹೊಳಿಗೆ ಉನ್ನತ ಸ್ಥಾನ ಕೊಟ್ಟರೆ ನಮ್ಮ ಭಾಗದಲ್ಲಿ ಹೆಚ್ಚಿನ ಕೆಲಸ ಮಾಡುತ್ತಾರೆ. ನಮ್ಮದು ಸ್ವಾರ್ಥ ಇದೆ. ಅವರು ಮಂತ್ರಿ ಆದರೆ ನಮ್ಮ ಕ್ಷೇತ್ರದ ಕೆಲಸ ಆಗುತ್ತವೆ. ಹೀಗಾಗಿ ವರಿಷ್ಠರಲ್ಲಿ ವಿನಂತಿ ಸಹ ಮಾಡಿದ್ದೀವಿ ಅಂತ ಶಾಸಕ ಮಹೇಶ್ ಕುಮಟಳ್ಳಿ ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಕೇಸರಿ ನಿಷೇಧ ಆಗಿದೆಯೇ: ಆರಗ