Publish Date: Thu, 03 Jan 2019 (12:42 IST)
Updated Date: Thu, 03 Jan 2019 (12:44 IST)
ಬೆಳಗಾವಿ : ಕೊನೆಗೂ ಪ್ರತ್ಯೇಕ್ಷರಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮಾಧ್ಯಮದವರ ಮೇಲೆ ಪುಲ್ ಗರಂ ಆಗಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ಇಂದು ಗೋಕಾಕ್ ಮಿಲ್ ನಲ್ಲಿರುವ ಮೈದಾನದಲ್ಲಿ ಬ್ಯಾಡ್ಮಿಂಟನ್ ಆಡಿ ನಿವಾಸಕ್ಕೆ ಹಿಂದಿರುಗುವಾಗ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರು. ಆ ವೇಳೆ ಮಾಧ್ಯಮದವರು ಅವರ ಮುಂದಿನ ರಾಜಕೀಯ ನಿಲುವುಗಳ ಬಗ್ಗೆ ಕೇಳಲು ಮುಂದಾದಾಗ ಮಾಧ್ಯಮದವರಿಗೆ ಬಾಯಿ ಬಂದಂತೆ ಬೈದಿದ್ದಾರೆ.
'ಒದಿಯಬೇಕು ನಿಮ್ಮನ್ನ ಜಾಡಿಸಿ ಒದಿಯಬೇಕು. ಹುಚ್ಚರು ಇದ್ದೀರಿ ನೀವು, ಅತಿಯಾಯ್ತು ನಿಮ್ದು' ಎಂದು ಹೇಳಿ ರಮೇಶ್ ಜಾರಕಿಹೊಳಿ ಮನೆಯೊಳಗೆ ತೆರಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.